Wednesday, June 24, 2026
Homeಕರಾವಳಿಉಡುಪಿಉಡುಪಿ : ಆಕಸ್ಮಿಕ  ಬೆಂಕಿ ಅನಾಹುತ: ಫ್ಯಾನ್ಸಿ ಅಂಗಡಿ ಸುಟ್ಟು ಭಸ್ಮ

ಉಡುಪಿ : ಆಕಸ್ಮಿಕ  ಬೆಂಕಿ ಅನಾಹುತ: ಫ್ಯಾನ್ಸಿ ಅಂಗಡಿ ಸುಟ್ಟು ಭಸ್ಮ

- Advertisement -
- Advertisement -

ಉಡುಪಿ : ಆಕಸ್ಮಿಕ  ಬೆಂಕಿ ಅನಾಹುತ ಸಂಭವಿಸಿ ಫ್ಯಾನ್ಸಿ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ

ಬೈಂದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ  ನಾವುಂದ ಜಂಕ್ಷನ್ ಪ್ಲಾಜಾ ಗ್ರೋ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಭಾ ಎಂಬೋರಿಗೆ ಸೇರಿದ ಫ್ಯಾನ್ಸಿ ಸ್ಟೋರ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ರೂಪಾಯಿಗಳ ವಸ್ತು ಸುಟ್ಟು ಕರಕಲಾಗಿವೆ.  

ಪ್ರತಿಭಾ ಫ್ಯಾನ್ಸಿ ಜೊತೆಗೆ ಟೈಲರಿಂಗ್ ಮಾಡುತ್ತಿದ್ದರು.ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ಐಟಂಗಳ ಜೊತೆಗೆ ಸುಮಾರು 5000 ರೂಪಾಯಿ ನಗದು  ಇತ್ತು ಎನ್ನಲಾಗಿದ್ದು ಎಲ್ಲವೂ ಬೆಂಕಿಗಾಹುತಿಯಾಗಿದೆ.

ಅಂಗಡಿ ಮಾಲಕಿ ಪ್ರತಿಭಾ ಮಧ್ಯಾಹ್ನ 12.00ರವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.  ನಂತರ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು 12.45ರ ಹೊತ್ತಿಗೆ ಹೊಗೆ ತುಂಬಿಕೊಂಡದ್ದನ್ನು ಆಸುಪಾಸಿನ ಅಂಗಡಿಯವರು ಹಾಗೂ ಸ್ಥಳಿಯರು ನೋಡಿ ಅಗ್ನಿಶಾಮಕ ಹಾಗೂ ಪೋಲೀಸರಿಗೆ ಫೋನ್ ಮಾಡಿದ್ದರು. ಅಗ್ನಿ ಶಾಮಕದವರು ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು 3 ಲಕ್ಷಕ್ಕೂ ಹೆಚ್ಚು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.  ಸ್ಥಳಕ್ಕೆ ಬೈಂದೂರು ಪೋಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!