Friday, June 5, 2026
Homeಅಪರಾಧಯುವಕರ ಗುಂಪೊಂದು ಯುವಕನೋರ್ವನಿಗೆ ಥಳಿಸುತ್ತಿರುವ ವಿಡಿಯೋ ವೈರಲ್; ಘಟನೆಯ ಕುರಿತು ಪ್ರಕರಣ ದಾಖಲಾಗಿಲ್ಲ

ಯುವಕರ ಗುಂಪೊಂದು ಯುವಕನೋರ್ವನಿಗೆ ಥಳಿಸುತ್ತಿರುವ ವಿಡಿಯೋ ವೈರಲ್; ಘಟನೆಯ ಕುರಿತು ಪ್ರಕರಣ ದಾಖಲಾಗಿಲ್ಲ

- Advertisement -
- Advertisement -

ಬಂಟ್ವಾಳ: ಯುವಕನೋರ್ವನಿಗೆ ಯುವಕರ ಗುಂಪೊಂದು ರಕ್ತ ಬರುವ ರೀತಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಸಾಲೆತ್ತೂರು, ವಿಟ್ಲ, ಪುತ್ತೂರು ಕಡೆಯದ್ದಾಗಿರಬಹುದು ಎನ್ನಲಾಗುತ್ತಿದೆ.

ಯುವಕನನ್ನ ಥಳಿಸುತ್ತಿರುವ ವಿಡಿಯೋ ಎಲ್ಲಿಯದ್ದು ಎಂಬುದು ಅಸ್ಪಷ್ಟವಾಗಿದ್ದು, ಯುವಕರ ಗುಂಪು ಮುಸ್ಲಿಂ ಭಾಷೆಯಲ್ಲಿ ಮಾತನಾಡುತ್ತಿದ್ದನ್ನು ಕಾಣಬಹುದಾಗಿದೆ. ಹೀಗಾಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿರುವ ಸಾಧ್ಯತೆ ಇದೆ. ಅವರು ಹುಡುಗಿಯ ವಿಚಾರಕ್ಕೆ ಸಂಬಂಧಿಸಿ ಹೊಡೆಯುತ್ತಿದ್ದು, ಮೊಬೈಲ್‌ನ ಲಾಕ್‌ ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ. ಯುವಕನ ತುಟಿಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿರುವುದು ದೃಶ್ಯದಲ್ಲಿ ಕಂಡುಬರುತ್ತಿದೆ ಎನ್ನಲಾಗಿದೆ. 

ಈ ಕುರಿತು ಯಾವುದೇ ಪೊಲೀಸ್‌ ಠಾಣೆಗಳಲ್ಲೂ ಪ್ರಕರಣ ದಾಖಲಾಗಿಲ್ಲ.

- Advertisement -

Latest News

error: Content is protected !!