Saturday, June 6, 2026
Homeತಾಜಾ ಸುದ್ದಿಪಿಯು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ತಾನು ಹಾರುವುದಿದ್ದರೆ ಇದೇ ಬಾವಿಗೆ ಎಂದಿದ್ದ ವಿದ್ಯಾರ್ಥಿ!

ಪಿಯು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ತಾನು ಹಾರುವುದಿದ್ದರೆ ಇದೇ ಬಾವಿಗೆ ಎಂದಿದ್ದ ವಿದ್ಯಾರ್ಥಿ!

- Advertisement -
- Advertisement -

ಹಿರಿಯಡ್ಕ: ಉಡುಪಿಯ ಹಿರಿಯಡ್ಕದ ವಿದ್ಯಾರ್ಥಿ ಪ್ರಥಮೇಶ್‌ ತನ್ನ ಆತ್ಮಹತ್ಯೆ ಕುರಿತಂತೆ ಮೊದಲೇ ನಿರ್ಧರಿಸಿದ್ದನೇ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ತನ್ನ ಸಹಪಾಠಿಗಳ ಜತೆಗೆ ಘಟನೆ ನಡೆಯುವ ಕೆಲವು ದಿನಗಳ ಹಿಂದೆಯಷ್ಟೇ, ನಾನು ಬಾವಿಗೆ ಹಾರುವುದಿದ್ದರೆ ಇದೇ ಬಾವಿಗೆ ಎಂದು ಹೇಳಿಕೊಂಡಿದ್ದ. ಆದರೆ ಈ ವಿಚಾರವನ್ನು ಆತನ ಗೆಳೆಯರು ತಮಾಷೆ ಎಂದು ಭಾವಿಸಿದ್ದರು.

ಸೋಮವಾರ ಸಂಜೆ ವಿದ್ಯಾರ್ಥಿ ಪ್ರಥಮೇಶ್‌ ಶಾಲಾ ಬ್ಯಾಗ್‌ ಸಹಿತ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ಈ ಜನವಾಸ ಇಲ್ಲದ ಮನೆ ಪರಿಸರದ ಬಾವಿಯಲ್ಲಿ. ಪರೀಕ್ಷೆ ಹಿನ್ನೆಲೆಯಲ್ಲಿ ಮನೆಯಲ್ಲಿ ಪೋಷಕರು ಮೊಬೈಲ್‌ ತೆಗೆದಿರಿಸಿದ್ದ ಬಳಿಕ ಈತ ಈ ಕೃತ್ಯ ಎಸಗಿದ್ದ. ಮೊಬೈಲ್‌ನಲ್ಲಿ ಆನ್‌ಲೈನ್‌ ಆಟವಾಡುತ್ತಿದ್ದ ಆತ ಅಪಾಯಕಾರಿ ಡೆತ್‌ಗೆಮ್‌ನ ವಿವಿಧ ಟಾಸ್ಕ್ ಗಳನ್ನು ದಾಟಿ ಅಂತಿಮ ಹಂತ ತಲುಪಿದ್ದ ಎಂದು ತಿಳಿದುಬಂದಿತ್ತು.

ಇನ್ನು ಪ್ರಥಮೇಶ್‌ ಸೌಮ್ಯ ಸ್ವಭಾವದ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ಯಾವುದೇ ಕಿರಿಕಿರಿ ಮಾಡಿದವನಲ್ಲ. ಆತ ಮನೆಯಲ್ಲಿಯೂ ಶಾಂತವಾಗಿರುತ್ತಿದ್ದ.ಅವನಿಗೆ ಯಾರೂ ಬೈಯುತ್ತಿರಲಿಲ್ಲ. ಆದರೂ ಇಂತಹ ದುರ್ಘ‌ಟನೆ ನಡೆದಿರುವುದು ಬೇಸರದ ಸಂಗತಿ. ಆತ ಬೇಗನೆ ಖಿನ್ನತೆಗೆ ಒಳಗಾಗುತ್ತಿದ್ದ. ಆ ಕಾರಣದಿಂದಲೇ ಆತನನ್ನು ಯಾರು ಕೂಡ ಮನೆಯಲ್ಲಿ ಬೈಯುತ್ತಿರಲಿಲ್ಲ ಎನ್ನುತ್ತಾರೆ ಆತನ ನೆರೆಮನೆಯವರು.

- Advertisement -

Latest News

error: Content is protected !!