Thursday, June 25, 2026
Homeಅಪರಾಧಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ವೈದ್ಯೆಯ ಮೇಲೆ ಸಾಮೂಹಿಕ ಕೃತ್ಯವೆಸಗಿಲ್ಲ: ಸಿಬಿಐ ತನಿಖೆ ವರದಿ

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ವೈದ್ಯೆಯ ಮೇಲೆ ಸಾಮೂಹಿಕ ಕೃತ್ಯವೆಸಗಿಲ್ಲ: ಸಿಬಿಐ ತನಿಖೆ ವರದಿ

- Advertisement -
- Advertisement -

ಕೋಲ್ಕತ್ತಾ: ಟ್ರೈನಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆಸಿರುವ ತನಿಖೆಯಲ್ಲಿ ಸಿಬಿಐ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿಲ್ಲ ಎಂದು ಸೂಚಿಸಿದೆ ಎಂದು ವರದಿ ಹೇಳಿದೆ.

ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಆಗಸ್ಟ್ 9 ರಂದು ನಡೆದ ಭೀಕರ ಹತ್ಯೆ ಮತ್ತು ಅತ್ಯಾಚಾತ ಪ್ರಕರಣದಲ್ಲಿ ಸಂಜೋಯ್ ರಾಯ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈತ ಮಾತ್ರ ಭಾಗಿಯಾಗಿದ್ದಾನೆ ಎಂದು ತನಿಖೆ ಸೂಚಿಸುತ್ತದೆ ಎಂದು ಸಿಬಿಐ ವರದಿ ಸಲ್ಲಿಸಿದೆ.

ಡಿಎನ್‌ಎ ವರದಿಯೂ ಒಬ್ಬ ವ್ಯಕ್ತಿಯ ಕೈವಾಡವನ್ನು ದೃಢಪಡಿಸಿದ್ದು, ಕೋಲ್ಕತ್ತಾ ಪೋಲೀಸ್‌ ಗೆ ಸೇರಿದ್ದ ನಾಗರಿಕ ಸ್ವಯಂಸೇವಕ ರಾಯ್ ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ತನಿಖೆ ಸೂಚಿಸುತ್ತದೆ ಎಂದು ವರದಿಯಾಗಿದೆ.

ಆದರೆ ಸಿಬಿಐಯು ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಕುರಿತು ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಏಜೆನ್ಸಿಯು ವಿಧಿವಿಜ್ಞಾನ ವರದಿಯನ್ನು ಅವರ ಅಂತಿಮ ಅಭಿಪ್ರಾಯಕ್ಕಾಗಿ ಸ್ವತಂತ್ರ ತಜ್ಞರಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ

- Advertisement -

Latest News

error: Content is protected !!