Thursday, June 4, 2026
Homeಮನರಂಜನೆಕಾಮಿಡಿ ಕಿಲಾಡಿ ನಯನಾ ನಿಮ್ಗೆ ಇದೆಲ್ಲಾ ಬೇಕಾಗಿತ್ತಾ?

ಕಾಮಿಡಿ ಕಿಲಾಡಿ ನಯನಾ ನಿಮ್ಗೆ ಇದೆಲ್ಲಾ ಬೇಕಾಗಿತ್ತಾ?

- Advertisement -
- Advertisement -

ಬೆಂಗಳೂರು : ಸೆಲೆಬ್ರೆಟಿಗಲು ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮಾಡೋ ಯಡವಟ್ಟುಗಳು ಅವರನ್ನು ಎಲ್ಲಿದೆ ತಂದು ನಿಲ್ಲಿಸುತ್ತವೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಇದೀಗ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಅವರು ಫೇಸ್ ಬುಕ್ ನಲ್ಲಿ ಸ್ಪಲ್ಪ ಜಾಸ್ತಿನೇ ಮಾತಾಡಿ ಕೊನೆಗೆ ಕ್ಷಮೆ ಕೇಳಿದ್ದಾರೆ.

ಮೊನ್ನೆ ನಯನ ಅವರು ಫೋಟೋ ಜೊತೆಗೆ ಇಂಗ್ಲೀಷಿನಲ್ಲಿ ಸಾಲುಗಳನ್ನು ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.. ಅದನ್ನು ನೋಡಿದ ನೆಟ್ಟಿಗರು ಬೆಳೆಯೋವರ್ಗೆ ಕನ್ನಡ.. ಬೆಳೆದಮೇಲೆ ಇಂಗ್ಲೀಷಾ ಎಂದು ಕಮೆಂಟ್ ಹಾಕಿದ್ದರು.. ಅದಕ್ಕೆ ಪ್ರತಿಕ್ರಿಯೆ ನೀಡಿದ ನಯನ “ಅಪ್ಪಾ ಕನ್ನಡದ ಭಕ್ತ.. ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ” ಎಂದಿದ್ದರು..

ನಯನ ಅವರಿಗೆ ಜನರ ಬಳಿ ಹೇಗೆ ಮಾತನಾಡಬೇಕೆಂಬ ಸಣ್ಣ ತಿಳುವಳಿಕೆಯೂ ಇಲ್ಲದಂತಾಯ್ತಾ? ಆತನಿಗೆ ಬೇರೆಯ ರೀತಿಯಲ್ಲಿ ಸಭ್ಯ ಭಾಷೆಯಲ್ಲಿ ಉತ್ತರ ನೀಡಬಹುದಾಗಿತ್ತು.. ಆದರೆ ಈ ರೀತಿ ಕೆಟ್ಟ ಪದ ಬಳಸೋ ಅಗತ್ಯ ಏನಿತ್ತು.. ಈ ಕೂಡಲೇ ನಯನಾ ಅವರು ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು.. ಇದು ಎಲ್ಲೆಡೆ ವೈರಲ್  ಆಗ್ತಿದ್ದಂತೆ ಎಚ್ಚೆತ್ತುಕೊಂಡ ನಯನಾ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

https://www.facebook.com/1804794853095495/videos/630802704194853/

- Advertisement -

Latest News

error: Content is protected !!