Monday, June 29, 2026
Homeಕರಾವಳಿಪುತ್ತೂರು: ಪೊಲೀಸ್ ಕಾನ್‌ಸ್ಟೇಬಲ್ ಸೇರಿ 5 ಮಂದಿಗೆ ಕೊರೋನಾ ಪಾಸಿಟಿವ್

ಪುತ್ತೂರು: ಪೊಲೀಸ್ ಕಾನ್‌ಸ್ಟೇಬಲ್ ಸೇರಿ 5 ಮಂದಿಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಪುತ್ತೂರು: ತಾಲೂಕಿನಲ್ಲಿ ಇಂದು ಐದು ಮಂದಿಗೆ ಡೆಡ್ಲಿ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇವರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ 30 ವರ್ಷ ಪ್ರಾಯದ ಕಾನ್‌ಸ್ಟೇಬಲ್, ಹಾಗೂ ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾನ್‌ಸ್ಟೇಬಲ್ ಒಬ್ಬರ 40 ವರ್ಷ ಪ್ರಾಯದ ತಾಯಿ ಸೇರಿದಂತೆ 5 ಮಂದಿಗೆ ಕೋವಿಡ್ ಸೋಂಕು ತಗುಲಿದೆ.

ಈ ಹಿನ್ನಲೆಯಲ್ಲಿ ಕಾನ್‌ಸ್ಟೇಬಲ್ ಅವರ ಸಂಪ್ಯ ವಸತಿ ಗೃಹದ ಕೊಠಡಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಮಹಿಳಾ ಕಾನ್‌ಸ್ಟೇಬಲ್ ಅವರ ತಾಯಿ ಇರುವ ಪುತ್ತೂರು ವಸತಿ ಗೃಹದ ಕೊಠಡಿಯನ್ನೂ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!