Thursday, June 4, 2026
Homeಕರಾವಳಿಉಡುಪಿಉಡುಪಿ: 7 ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

ಉಡುಪಿ: 7 ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

- Advertisement -
- Advertisement -

ಉಡುಪಿ: 7 ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕಾಪುವಿನಲ್ಲಿ ನಡೆದಿದೆ. ಅನುರಾಧಾ ಕರ್ಕೆರಾ ಬಂಧಿತ ಮಹಿಳೆ.

ಆಸ್ತಿ ವಿಚಾರದ ಗಲಾಟೆಗೆ ಸಂಬಂಧಿಸಿದ ಆರೋಪಿಯಾಗಿರುವ ಈಕೆ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದಳು. ಆಕೆಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ, ಕರೆ ತಂದಿದ್ದಾರೆ.

ಮೂಳೂರಿನ ಆಸ್ತಿ ಬಗ್ಗೆ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, 2012ರಲ್ಲಿ ಪ್ರಕರಣ ದಾಖಲಾಗಿತ್ತು.ಆಕೆಯ ಸಹೋದರಿ ನೀತಾ ನೀಡಿದ್ದ ದೂರಿನಂತೆ ಅನುರಾಧಾ ವಿರುದ್ಧ ಪ್ರಕರಣ ದಾಖಲಾಗಿತ್ತು.2017ರ ವರೆಗೆ ಕೋರ್ಟ್‌ಗೆ ಹಾಜರಾಗಿ ಬಳಿಕ ತಲೆಮರೆಸಿ ಕೊಂಡಿದ್ದಳು. ಈ ಬಗ್ಗೆ ಉಡುಪಿಯ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಮುಂಬಯಿಗೆ ತೆರಳಿದ್ದ ಕಾಪು ಎಎಸ್‌ಐ ರವೀಶ್‌ ಹೊಳ್ಳ, ಎಚ್‌ಸಿಗಳಾದ ಮೊಹಮ್ಮದ್‌ ರಫೀಕ್‌ ಮತ್ತು ಸುಲೋಚನಾ ಅವರು ಎಸ್‌ಐ ಅಬ್ದುಲ್‌ ಖಾದರ್‌ ಮಾರ್ಗದರ್ಶನದಂತೆ ಆರೋಪಿಯನ್ನು ಆ. 18ರಂದು ಸಿಯಾನ್‌ನಲ್ಲಿ ಬಂಧಿಸಿ, ಊರಿಗೆ ಕರೆ ತಂದಿದ್ದಾರೆ.ಆಕೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15,000 ರೂ. ದಂಡ ವಿಧಿಸಿ, ಆ. 21ರಂದು ಮತ್ತೆ ಹಾಜರಾಗುವಂತೆ ಸೂಚಿಸಿ ಜಾಮೀನು ನೀಡಿದೆ.

- Advertisement -

Latest News

error: Content is protected !!