Saturday, June 6, 2026
Homeಕರಾವಳಿಮೂಡಬಿದಿರೆ:  ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಕದ್ದು ಪರಾರಿ

ಮೂಡಬಿದಿರೆ:  ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಕದ್ದು ಪರಾರಿ

- Advertisement -
- Advertisement -

ಮೂಡಬಿದಿರೆ:  ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಮೂಡಬಿದಿರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಭಾನುವಾರ ನಡೆದಿದೆ.

ನಿರ್ಮಲಾ ಪಂಡಿತ್ ಅವರು ವಿವೇಕಾನಂದ ನಗರದಲ್ಲಿರುವ ಮಗಳ ಮನೆಯ ತೋಟದಲ್ಲಿದ್ದಾಗ ಮನೆಯ ಗೇಟ್‌ ಬಳಿ ಸ್ಕೂಟರ್ ನಲ್ಲಿ ಇಬ್ಬರು ಬಂದಿದ್ದಾರೆ. ಈ ಪೈಕಿ ಒಬ್ಬ ಮಹಿಳೆಯ ಬಳಿ ಬಂದು ಆರ್.ಕೆ.ಟ್ರೇಡರ್ಸ್ ಎಲ್ಲಿ ಎಂದು ಕೇಳಿದಾಗ ಮಹಿಳೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ನಂತರ ಆ ವ್ಯಕ್ತಿ ವಿಸಿಟಿಂಗ್ ಕಾರ್ಡ್‌ ತೋರಿಸಿ ಈ ವಿಳಾಸ ಎಲ್ಲಿ ಎಂದು ಮರು ಪ್ರಶ್ನಿಸಿದ್ದಾನೆ. ನಿರ್ಮಲಾ ಅವರು ವಿಸಿಟಿಂಗ್ ಕಾರ್ಡ್‌ ನೋಡುತ್ತಿದ್ದಂತೆ ಅವರ ಚಿನ್ನದ ಸರ ಮತ್ತು ತಾಳಿ ಸರ ಎಳೆದಿದ್ದಾನೆ. ಈ ವೇಳೆ ಚಿನ್ನದ ಸರ ಕಳ್ಳನ ಕೈಗೆ ಬಂದರೆ ತಾಳಿ ಸರ ಅರ್ಧ ಮಾತ್ರ ಸಿಕ್ಕಿದ್ದು, ಉಳಿದ ಭಾಗ ಕತ್ತಿನಲ್ಲೆ ಉಳಿದಿದೆ. ಈ ವೇಳೆ ನಿರ್ಮಲಾ ಅವರು ಬೊಬ್ಬೆ ಹಾಕಿದಾಗ ಮನೆಯವರು ಹೊರ ಬಂದಿದ್ದು ಸರ ಕಸಿದ ವ್ಯಕ್ತಿ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಆರೋಪಿಗಳ ಮುಖ ಚಹರೆಯನ್ನು ಗುರುತು ಹಚ್ಚಿದ್ದಾರೆ. ಕಳವಾದ ಚಿನ್ನದ ಮೌಲ್ಯ ಸುಮಾರು ಒಂದೂವರೆ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!