Wednesday, June 24, 2026
Homeಅಪರಾಧವಿಟ್ಲದಲ್ಲಿ ಆಟೋ ಚಾಲಕನಿಗೆ ಚೂರಿ ಇರಿತ ಪ್ರಕರಣ: ಘಟನೆಗೆ ಹುಡುಗಿ ವಿಚಾರವೇ ಕಾರಣ

ವಿಟ್ಲದಲ್ಲಿ ಆಟೋ ಚಾಲಕನಿಗೆ ಚೂರಿ ಇರಿತ ಪ್ರಕರಣ: ಘಟನೆಗೆ ಹುಡುಗಿ ವಿಚಾರವೇ ಕಾರಣ

- Advertisement -
- Advertisement -

ವಿಟ್ಲ: ಉರಿಮಜಲು ಜಂಕ್ಷನ್‌ನಲ್ಲಿ ಆ.18 ಭಾನುವಾರದಂದು ಬೆಳಗ್ಗೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ಈ ಘಟನೆಗೆ ಮುಖ್ಯ ಕಾರಣ ಹುಡುಗಿಯ ವಿಷಯವೆಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಉರಿಮಜಲು ನಿವಾಸಿ ಆಟೋ ಚಾಲಕ ಶರೀಫ್ (38). ಕಾರ್ಯಾಡಿ ನಿವಾಸಿ ಹಾಫಿಲ್ ಯಾನೆ ಆಪೀ ಆರೋಪಿಯಾಗಿದ್ದು, ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಹಾಫೀಲ್ ಎಂಬಾತ ಆಟೋ ಚಾಲಕ ಶರೀಫ್ ಉರಿಮಜಲು ಜಂಕ್ಷನ್‌ಲ್ಲಿ ಬೇರೆಯವರ ಜತೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದು ಮಾತಿಗಿಳಿದಿದ್ದಾನೆ. ನಂತರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆರೋಪಿ ಶರೀಫ್ ಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಈ ಘಟನೆಯು ಹುಡುಗಿ ವಿಚಾರಕ್ಕೆ ಸಂಬಂಧಪಟ್ಟಿದ್ದು, ಇಬ್ಬರ ನಡುವೆ ವಾಗ್ವಾದ ನಡೆದು ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!