Tuesday, June 9, 2026
Homeಕರಾವಳಿಉಡುಪಿಆದಿ ಉಡುಪಿ ಎಪಿಎಂಸಿ ನಿವೇಶನ ಮಾರಾಟಕ್ಕೆ ವಿರೋಧ; ಉರುಳು ಸೇವೆ ಮಾಡಿ ವರ್ತಕರ ಪ್ರತಿಭಟನೆ

ಆದಿ ಉಡುಪಿ ಎಪಿಎಂಸಿ ನಿವೇಶನ ಮಾರಾಟಕ್ಕೆ ವಿರೋಧ; ಉರುಳು ಸೇವೆ ಮಾಡಿ ವರ್ತಕರ ಪ್ರತಿಭಟನೆ

- Advertisement -
- Advertisement -

ಉಡುಪಿ: ಆದಿ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ನಿವೇಶನ ಮಾರಾಟ ವಿರೋಧಿಸಿ ಇಂದು ಪ್ರತಿಭಟನೆ ನಡೆಯಿತು.

ಮಲ್ಪೆ ರಸ್ತೆಯಲ್ಲಿರುವ ಮಾರುಕಟ್ಟೆಯ ನಿವೇಶನ ಮಾರಾಟ ವಿರೋಧಿಸಿ ವರ್ತಕರು ಉರುಳು ಸೇವೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಜಮಾಯಿಸಿದ್ದ ವರ್ತಕರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು‌.

ಎಪಿಎಂಸಿಯ ಹನ್ನೊಂದು ನಿವೇಶನಗಳ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವರ್ತಕರು, ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest News

error: Content is protected !!