Saturday, June 6, 2026
Homeತಾಜಾ ಸುದ್ದಿನಿಲ್ಲುತ್ತಿಲ್ಲ ಕೊರೋನಾ ರಣಕೇಕೆ: ರಾಜ್ಯದಲ್ಲಿ ಇಂದು 2313 ಜನರಿಗೆ ಕೊರೋನಾ ಪಾಸಿಟಿವ್, 57 ಮಂದಿ ಸಾವು

ನಿಲ್ಲುತ್ತಿಲ್ಲ ಕೊರೋನಾ ರಣಕೇಕೆ: ರಾಜ್ಯದಲ್ಲಿ ಇಂದು 2313 ಜನರಿಗೆ ಕೊರೋನಾ ಪಾಸಿಟಿವ್, 57 ಮಂದಿ ಸಾವು

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಕೇಕೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನ 2313 ಜನರಿಗೆ ಡೆಡ್ಲಿ ಕೊರೋನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇಂದಿನ ಹೊಸ 2313 ಸೋಂಕು ಪ್ರಕರಣಗಳ ಕಾರಣದಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 29 ಮಂದಿ ಸೇರಿ ರಾಜ್ಯದಲ್ಲಿ ಇಂದು ದಾಖಲೆಯ 57 ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ 543ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 1447, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 134, ಉಡುಪಿ ಜಿಲ್ಲೆಯಲ್ಲಿ 34, ಹಾಗೆಯೆ ಚಾಮರಾಜನಗರದಲ್ಲಿ 13 ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ.

- Advertisement -

Latest News

error: Content is protected !!