Sunday, June 7, 2026
Homeಕರಾವಳಿಮಂಗಳೂರು; ಆಟೋ ಓಡಿಸುತ್ತಿದ್ದಾಗಲೇ ಹೃದಯಾಘಾತವಾಗಿ ಚಾಲಕ ಸಾವು

ಮಂಗಳೂರು; ಆಟೋ ಓಡಿಸುತ್ತಿದ್ದಾಗಲೇ ಹೃದಯಾಘಾತವಾಗಿ ಚಾಲಕ ಸಾವು

- Advertisement -
- Advertisement -

ಮಂಗಳೂರು; ಆಟೋ ಓಡಿಸುತ್ತಿದ್ದಾಗಲೇ ಹೃದಯಾಘಾತವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಕೋಟೆಕಾರಿನಲ್ಲಿ ನಡೆದಿದೆ.ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ದುರ್ದೈವಿ.

ಮಜೀದ್ ಸಂಬಂಧಿಕರಾದ ಮಹಿಳೆಯರಿಬ್ಬರನ್ನು ತನ್ನ ಆಟೋದಲ್ಲಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಚಾಲಕನಿಲ್ಲದ ಮುಂದೆ ಚಲಿಸಿದ ರಿಕ್ಷಾವು ಅದೃಷ್ಟವಶಾತ್ ಅಲ್ಲೇ ಇದ್ದ ಆಟೋ ಪಾರ್ಕಿನಲ್ಲಿ ನಿಂತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನಿಂತಿದೆ.


ಪ್ರಯಾಣಿಕ ಮಹಿಳೆಯರಲ್ಲಿ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯನ್ನು ವೈದ್ಯರ ಕ್ಲಿನಿಕ್ ಗೆ ಬಿಡಲು ಮಜೀದ್ ತೆರಳಿದ್ದರು ಎನ್ನಲಾಗಿದೆ.ಮೃತ ಮಜೀದ್ ಅವರು ಶ್ರಮ ಜೀವಿಯಾಗಿದ್ದು, ಹಗಲಿರುಳು ರಿಕ್ಷಾ ಚಲಾಯಿಸಿ ಸಂಪಾದನೆ ಜೀವನ ಸಾಗಿಸುತ್ತಿದ್ದರು. ಮೃತರು ಪತ್ನಿ,ಒಂದು ಗಂಡು,ಮತ್ತೊಂದು ಹೆಣ್ಣು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!