Thursday, June 4, 2026
Homeಕರಾವಳಿಉಡುಪಿಉಡುಪಿ; ಅಪ್ಪನ ಜೀವ ಉಳಿಸಿದ 8 ವರ್ಷದ ಬಾಲಕ

ಉಡುಪಿ; ಅಪ್ಪನ ಜೀವ ಉಳಿಸಿದ 8 ವರ್ಷದ ಬಾಲಕ

- Advertisement -
- Advertisement -

ಉಡುಪಿ; 8 ವರ್ಷದ ಬಾಲಕ ಅಪ್ಪನ ಜೀವ ಉಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ದೊಡ್ಡಣಗುಡ್ಡೆ ಎಂಬಲ್ಲಿ ಅಜಯ್ ಹಾಗೂ ಅವರ  8 ವರ್ಷದ ಮಗ ದಿಯಾನ್ ವಾಸವಾಗಿದ್ದರು. ಅವರ ಮನೆಯಲ್ಲಿ  ವಿದ್ಯುತ್ ಸಂಪರ್ಕವಿಲ್ಲ. ಸೋಮವಾರ ಸಂಜೆ ತಂದೆ ಅಜಯ್ ಏಕಾಏಕಿ ಕುಸಿದುಬಿದ್ದು ಪ್ರಜ್ಞಾಹೀನರಾಗಿದ್ದಾರೆ. ತಕ್ಷಣ ತಂದೆಯ ಸ್ಥಿತಿ ನೋಡಿದ ದಿಯಾನ್ ಕೂಡಲೇ ಕತ್ತಲಲ್ಲೇ ನೆರೆಮನೆಗೆ ಹೋಗಿ ವಿಚಾರ ತಿಳಿಸಿದ್ದಾನೆ.

 ಕೂಡಲೇ ಮನೆಗೆ ಬಂದ ನೆರೆಮನೆಯವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ  ಕರೆ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಒಳಕಾಡುವರು ತಂದೆ ಅಜಯನನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆಗೆ ಸಂದರ್ಭ ಸ್ಥಳೀಯ ಸಮಾಜಸೇವಕಿ ಜ್ಯೋತಿ ನೆರವಿಗೆ ಬಂದಿದ್ದು, ಬಾಲಕ ದಿಯಾನನಿಗೂ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಕರಂಬಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ದಿಯಾನನ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!