Friday, July 17, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಹುಂಜದ ದೇಹದಲ್ಲಿತ್ತು ಗುಂಡು ಪಿನ್; ಸಾರು ಮಾಡಿ ತಿನ್ನುವಾಗ ಕೋಳಿ ತುಂಡಿನಲ್ಲಿ ಪತ್ತೆ

ಬೆಳ್ತಂಗಡಿ : ಹುಂಜದ ದೇಹದಲ್ಲಿತ್ತು ಗುಂಡು ಪಿನ್; ಸಾರು ಮಾಡಿ ತಿನ್ನುವಾಗ ಕೋಳಿ ತುಂಡಿನಲ್ಲಿ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಹುಂಜದ ಹೊಟ್ಟೆಯೊಳಗಿದ್ದ ಗುಂಡು ಪಿನ್ ಮನೆಯವರು  ಪದಾರ್ಥ ಮಾಡಿ ತಿನ್ನುವಾಗ ಕೋಳಿ ತುಂಡಿನಲ್ಲಿ ಸಿಕ್ಕಿ  ವ್ಯಕ್ತಿ ಪ್ರಾಣಾಪಾಯದಿಂದ ಪರಾಗಿರುವ ಘಟನೆ ಬೆಳ್ತಂಗಡಿಯಲ್ಲಿ ಆ.11 ರಂದು ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲಿನ ವ್ಯಕ್ತಿಯೊಬ್ಬರು  ತನ್ನ ಸ್ನೇಹಿತ ನೀಡಿದ ಹೂಂಜ ಕೋಳಿಯನ್ನು ಮನೆ ಮಂದಿ ಪದಾರ್ಥ ಮಾಡಿ ತಿನ್ನುವ ವೇಳೆ ಮಾಂಸದಲ್ಲಿ ತುಕ್ಕು ಹಿಡಿದ ಗುಂಡು ಪಿನ್ ಪತ್ತೆಯಾಗಿದೆ. ಮಾಹಿತಿ ಪ್ರಕಾರ ಹುಂಜ ಜೀವಂತ ಇರುವಾಗ ಹುಂಜದ ಮಾಂಸದೊಳಗೆ ತುಕ್ಕು ಹಿಡಿದ ಗುಂಡು ಪಿನ್ ಹೊಕ್ಕಿದೆ. ಹುಂಜವನ್ನು ಪದಾರ್ಥ ಮಾಡಿ ಊಟ ಮಾಡುವಾಗ ಕೋಳಿ ತುಂಡು  ಬಾಯಿಗೆ ಹಾಕುವಾಗ ಗುಂಡು ಪಿನ್ ಸಿಕ್ಕಿದೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಇದರ ಪೋಟೋ ಮನೆ ಮಂದಿ ಸೆರೆ ಹಿಡಿದ್ದಾರೆ.

- Advertisement -

Latest News

error: Content is protected !!