Thursday, June 4, 2026
Homeತಾಜಾ ಸುದ್ದಿಖ್ಯಾತ ನಿರ್ದೇಶಕನ ಜತೆ ಸಮಂತಾ ಡೇಟಿಂಗ್?; ನಟಿಯ ಡೇಟಿಂಗ್‌ ಲೈಫ್‌ ಬಗ್ಗೆ ಗಾಸಿಪ್‌

ಖ್ಯಾತ ನಿರ್ದೇಶಕನ ಜತೆ ಸಮಂತಾ ಡೇಟಿಂಗ್?; ನಟಿಯ ಡೇಟಿಂಗ್‌ ಲೈಫ್‌ ಬಗ್ಗೆ ಗಾಸಿಪ್‌

- Advertisement -
- Advertisement -

ಹೈದರಾಬಾದ್:‌ ನಟಿ ಸಮಂತಾ ಕುರಿತು ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಟಿಯ ಮಾಜಿ ಪತಿ ನಾಗಚೈತನ್ಯ ನಟಿ ಶೋಭಿತಾ ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ಸಮಂತಾ ಅವರ ಲವ್‌ ಲೈಫ್‌ ವಿಚಾರ ಮತ್ತೆ ಚರ್ಚೆಯಾಗುತ್ತಿದೆ.

ಸಮಂತಾ ಅಭಿಮಾನಿಗಳು ನಾಗಚೈತನ್ಯ ಅವರ ಎಂಗೇಜ್‌ ಮೆಂಟ್‌ ಬಳಿಕ ಸಮಂತಾ ಕೂಡ ಮದುವೆ ಆಗಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಹಲವು ಫ್ಯಾನ್ಸ್‌ ಗಳು ಸಮಂತಾ ಅವರಿಗೆ ಪ್ರಪೋಸ್‌ ಮಾಡುವ ಮಿಮ್ಸ್‌ ರೀತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಇನ್ನು ಇದೆಲ್ಲದರ ನಡುವೆ ನಟಿಯ ಡೇಟಿಂಗ್‌ ಲೈಫ್‌ ಬಗ್ಗೆ ಗಾಸಿಪ್‌ಯೊಂದು ಹರಿದಾಡುತ್ತಿದೆ. ‘ರಾಜ್ & ಡಿಕೆ’ ಖ್ಯಾತಿಯ ನಿರ್ದೇಶಕರ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವಂತಹ ವಿಚಾರಗಳು ಭಾರೀ ಚರ್ಚೆ ಮಾಡುತ್ತಿದೆ. ಸಮಂತಾ ನಿರ್ದೇಶಕ ರಾಜ್‌ ಜೊತೆ ʼಫ್ಯಾಮಿಲಿ ಮ್ಯಾನ್‌-2ʼ ಸರಣಿಯಲ್ಲಿ ಕೆಲಸ ಮಾಡಿದ್ದಾರೆ. ಮುಂದೆ ‘ರಾಜ್ & ಡಿಕೆ’ ಅವರ “ಸಿಟಾಡೆಲ್: ಹನಿ ಬನ್ನಿ” ಸರಣಿಯಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ರಾಜ್‌ ಜೊತೆ ಸಮಂತಾ ಆಪ್ತವಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಸ್ನೇಹದಲ್ಲಿ ಆತ್ಮೀಯತೆ ಹೆಚ್ಚಾಗಿದೆ ಎನ್ನಲಾಗಿದೆ. ʼಸಿಟಾಡೆಲ್‌ʼ ಸರಣಿ ಶೂಟಿಂಗ್‌ ವೇಳೆ ಸಮಂತಾ, ರಾಜ್‌ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಸಮಂತಾ ರಾಜ್‌ ಅವರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಹಬ್ಬಿರುವ ವರದಿಗಳ ಬಗ್ಗೆ ಸಮಂತಾ – ರಾಜ್‌ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ನಿರ್ದೇಶಕ ರಾಜ್ ನಿಡಿಮೋರು ವಿವಾಹಿತರಾಗಿದ್ದು, ಶೀಘ್ರವೇ ಅವರು ವಿಚ್ಛೇದನಕ್ಕೆ ಮುಂದಾಗಲಿದ್ದಾರೆ ಎನ್ನುವ ಮಾತುಗಳೂ ಟಾಲಿವುಡ್‌ ನಲ್ಲಿ ಕೇಳಿ ಬರುತ್ತಿದೆ ಎಂದು ವರದಿ ತಿಳಿಸಿದೆ.

- Advertisement -

Latest News

error: Content is protected !!