Wednesday, June 3, 2026
Homeಕರಾವಳಿಬೆಳ್ತಂಗಡಿ : ಎಎಸ್ಐ ದೇವಪ್ಪ ಅವರು ಪಿಎಸ್ಐ ಆಗಿ ಭಡ್ತಿ

ಬೆಳ್ತಂಗಡಿ : ಎಎಸ್ಐ ದೇವಪ್ಪ ಅವರು ಪಿಎಸ್ಐ ಆಗಿ ಭಡ್ತಿ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಸಹಾಯಕ ಉಪ ನಿರೀಕ್ಷಕರಾಗಿ(ASI) ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ಎಂ. ಉಪ ನಿರೀಕ್ಷಕರಾಗಿ (ಪಿ.ಎಸ್.ಐ) ಭಡ್ತಿಗೊಂಡು ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದರು.

ಇವರು ಕಳೆದ 31 ವರ್ಷಗಳಿಂದ ಮಂಗಳೂರು ಪಾಂಡೇಶ್ವರ, ಉಪ್ಪಿನಂಗಡಿ, ಮೂಡಬಿದ್ರೆ, ಪುಂಜಾಲಕಟ್ಟೆ, ಬಂಟ್ವಾಳ ಗ್ರಾಮಾಂತರ, ವೇಣೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ ವೃತ್ತ ನಿರೀಕ್ಷರ ಕಚೇರಿಯಲ್ಲಿ 3 ವರ್ಷ, ಬಳಿಕ ನಾಲ್ಕೂವರೆ ವರ್ಷಗಳಿಂದ ಬೆಳ್ತಂಗಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!