Saturday, June 28, 2025
HomeWorldಮಹಿಳಾ ಏಷ್ಯಾಕಪ್ ನ ಸೆಮಿ ಪಂದ್ಯಾವನ್ನು ಸುಲಭವಾಗಿ ಗೆದ್ದ ಭಾರತ; ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೊಂದೇ ಹೆಜ್ಜೆ

ಮಹಿಳಾ ಏಷ್ಯಾಕಪ್ ನ ಸೆಮಿ ಪಂದ್ಯಾವನ್ನು ಸುಲಭವಾಗಿ ಗೆದ್ದ ಭಾರತ; ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೊಂದೇ ಹೆಜ್ಜೆ

spot_img
- Advertisement -
- Advertisement -

ಡಂಬುಲಾ:  ಭಾರತ ತಂಡವು ವನಿತಾ ಏಷ್ಯಾಕಪ್ 2024ರ ಕೂಟದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಂದ್ಯದಲ್ಲಿ ಹರ್ಮನ್ ಬಳಗವು 10 ವಿಕೆಟ್ ಅಂತರದಿಂದ ಗೆದ್ದು ಫೈನಲ್ ಗೆ ಪ್ರವೇಶಿಸಿದೆ.

https://x.com/BCCIWomen/status/1816790794302554593?r

ಸೆಮಿ ಫೈನಲ್ ಪಂದ್ಯವು ರಣಗಿರಿ ಡಂಬುಲಾ ಸ್ಟೇಡಿಯಂನಲ್ಲಿ ನಡೆದಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಭಾರತೀಯರ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ ಎಂಟು ವಿಕೆಟ್ ಕಳೆದುಕೊಂಡು ಕೇಲವ 80 ರನ್ ಮಾತ್ರ ಗಳಿಸಿತು. ಭಾರತ ತಂಡವು 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಬಾಂಗ್ಲಾದೇಶ ವನಿತಾ ತಂಡವು ಬ್ಯಾಟಿಂಗ್ ನಲ್ಲಿ ಪರದಾಡಿತು. ನಾಯಕಿ ನಿಗರ್ ಸುಲ್ತಾನಾ 32 ರನ್ ಗಳಿಸಿದರೆ, ಶ್ರೋನಾ ಅಕ್ತರ್ ಅಜೇಯ 19 ರನ್ ಗಳಿಸಿದರು. ಉಳಿದ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ಭಾರತದ ಪರ ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ಅವರು ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಬಾಂಗ್ಲಾ ನೀಡಿದ 81 ರನ್ ಗುರಿ ಯಾವುದೇ ಸಮಸ್ಯೆ ತಂದೊಡ್ಡಲಿಲ್ಲ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರು ಸುಲಭವಾಗಿ ಗುರಿ ಬೆನ್ನತ್ತಿದರು. ಸ್ಮೃತಿ ಅಜೇಯ 55 ರನ್ ಗಳಿಸಿದರೆ, ಶಫಾಲಿ ಅಜೇಯ 26 ರನ್ ಮಾಡಿದರು.

ಇದೀಗ ಭಾರತ ಮತ್ತೊಮ್ಮೆ ಏಷ್ಯಾ ಕಪ್ ಫೈನಲ್ ಪ್ರವೇಶ ಪಡೆದಿದೆ. ಎರಡನೇ ಸೆಮಿ ಫೈನಲ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.

- Advertisement -
spot_img

Latest News

error: Content is protected !!