Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಮನೆಯವರು ಅಂಗಳದಲ್ಲಿದ್ದಾಗ ಕುಸಿದ ಮನೆ; ತಪ್ಪಿದ ಅನಾಹುತ

ಮಂಗಳೂರು: ಮನೆಯವರು ಅಂಗಳದಲ್ಲಿದ್ದಾಗ ಕುಸಿದ ಮನೆ; ತಪ್ಪಿದ ಅನಾಹುತ

- Advertisement -
- Advertisement -

ಮಂಗಳೂರು: ಮನೆಯವರು ಅಂಗಳದಲ್ಲಿ ಇದ್ದ ವೇಳೆ ಮನೆ ಕುಸಿದು ಬಿದ್ದಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಂಗಳೂರು ಹೊರವಲಯದ ಕಾಜಿಲ ನೂಯಿ ಎಂಬಲ್ಲಿ ಈ ಅವಘಡ ನಡೆದಿದ್ದು,ಧನಲಕ್ಷ್ಮೀ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ.

ಮನೆಯವರೆಲ್ಲರೂ ಅಂಗಳದಲ್ಲಿದ್ದಾಗ ಮನೆ ಕುಸಿದು ಬಿದ್ದಿರುವ ಕಾರಣ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ.

ಮನೆಯಲ್ಲಿದ್ದ ಸಾಮಾಗ್ರಿ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು,ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.ನಿರಂತರವಾಗಿ ಸುರಿದ ಮಳೆ ಮತ್ತು ಗಾಳಿಯಿಂದಾಗಿ ಮನೆ ಕುಸಿದು ಬಿದ್ದಿದೆ.

- Advertisement -

Latest News

error: Content is protected !!