Wednesday, June 3, 2026
Homeಕರಾವಳಿಉಡುಪಿಉಡುಪಿ: ರಾಷ್ಟ್ರೀಯ 60 ಮೀ. ಓಟದ ಸ್ಫರ್ಧೆಯಲ್ಲಿ ಚಿನ್ನ ಗೆದ್ದ ಉಡುಪಿಯ ಚಿನ್ಮಯ್

ಉಡುಪಿ: ರಾಷ್ಟ್ರೀಯ 60 ಮೀ. ಓಟದ ಸ್ಫರ್ಧೆಯಲ್ಲಿ ಚಿನ್ನ ಗೆದ್ದ ಉಡುಪಿಯ ಚಿನ್ಮಯ್

- Advertisement -
- Advertisement -

ಉಡುಪಿ: ರಾಷ್ಟೀಯ ಮಟ್ಟದ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಸಾಸ್ತಾನ, ಗುಂಡ್ಮಿ ಗ್ರಾಮದ ಚಿನ್ಮಯ್‍ಗೆ ಸ್ವರ್ಣ ಪದಕ ಲಭಿಸಿದೆ.

ಚಂದ್ರ ಪೂಜಾರಿ ಮತ್ತು ಪ್ರೇಮ ಪೂಜಾರಿ ಅವರ ಪುತ್ರನಾಗಿರುವ ಚಿನ್ಮಯ್ ಗುಂಡ್ಮಿ ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಚೆನ್ನೈನ ಅಡ್ಯಾರ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 13 ವರ್ಷದ ಚಿನ್ಮಯ್ ಚಿ‌ನ್ನದ ಪದಕ ಗೆಲ್ಲುವ ಮೂಲಕ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಚಿನ್ಮಯ್ ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ರೀಡಾ ಜೀವನ ಅತ್ಯುತ್ತಮವಾಗಿರಲಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ‌.‌

- Advertisement -

Latest News

error: Content is protected !!