- Advertisement -
![]()
- Advertisement -
ಬೆಳ್ತಂಗಡಿ;ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಹೊಳೆಯಲ್ಲಿ ಪತ್ತೆಯಾದ ಘಟನೆ ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿ ನಡೆದಿದೆ. ಬೆದ್ರಬೆಟ್ಟು ನಿವಾಸಿ ಬಾಬು ಮಡಿವಾಳ ಎಂಬುವರ ಪತ್ನಿ ಮೋಹಿನಿ (60) ಮೃತ ಮಹಿಳೆ.
ಭಾನುವಾರ ಸಂಜೆ ಕೂಲಿ ಕೆಲಸ ಮುಗಿಸಿ ಅಂಗಡಿಗೆ ಹೋದ ಮೋಹಿನಿ ಅವರು ಮನೆಗೆ ಹಿಂತಿರುಗಿರಲಿಲ್ಲ. ಬಳಿಕ ಮನೆಯವರು ಹುಡುಕಾಡಿದ್ದು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಸೋಮವಾರ ಬಂಗಾಡಿ ಸಹಸ್ರ ನಾಗಬನ ದೇವಸ್ಥಾನ ಬಳಿ ಹುಡುಕಾಟ ನಡೆಸಿದಾಗ ಅವರ ಮೃತದೇಹ ಪತ್ತೆಯಾಗಿದೆ.
ಮೋಹಿನಿ ಅವರು ಅಂಗಡಿಗೆ ಹೋಗುವ ದಾರಿ ಮಧ್ಯೆ ಬೆದ್ರಬೆಟ್ಟು ಬಳಿ ತೋಡು ದಾಟಿ ಹೋಗಬೇಕಾಗಿದ್ದು, ತೋಡು ದಾಟುವಾಗ ಆಯತಪ್ಪಿ ಬಿದ್ದು ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರದೊಂದಿಗೆ ಮೃತದೇಹವನ್ನು ನದಿಯಿಂದ ಮೇಲೆತ್ತಲಾಯಿತು. ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


