Saturday, October 17, 2026
Homeಕರಾವಳಿಪುತ್ತೂರು; ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಸನ್ಮಿತ್ ಮೃತದೇಹ ಪತ್ತೆ

ಪುತ್ತೂರು; ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಸನ್ಮಿತ್ ಮೃತದೇಹ ಪತ್ತೆ

- Advertisement -
- Advertisement -

ಪುತ್ತೂರು; ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಸನ್ಮಿತ್ (21) ಮೃತದೇಹ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ.

ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಷೋರೂಂ ಉದ್ಯೋಗಿ, ಕಡಬ ತಾಲ್ಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಅವರ ಪುತ್ರ ಸನ್ಮಿತ್ ಜುಲೈ 19 ರಂದು ಸರ್ವೆ ಸಮೀಪದ ಗೌರಿ ಹೊಳೆ ತಮ್ಮ ಸ್ಕೂಟರ್, ಪರ್ಸ್, ಮೊಬೈಲ್ ನ್ನು ಇಟ್ಟು ನಾಪತ್ತೆಯಾಗಿದ್ದರು.

ಈ ಬಗ್ಗೆ ಸನ್ಮಿತ್ ತಂದೆ ಚಂದ್ರ ಗೌಡ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಜುಲೈ 20 ರಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು.ಇಂದು ಎಸ್ ಡಿ ಆರ್ ಎಪ್ ತಂಡ ಕೂಡ ಆಗಮಿಸಿತ್ತು.ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿತ್ತು.ಸದ್ಯ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

- Advertisement -

Latest News

error: Content is protected !!