Tuesday, October 13, 2026
Homeಕರಾವಳಿಮಂಗಳೂರುಮಂಗಳೂರು: ಶಿರೂರು ರೀತಿಯಲ್ಲೇ ಕೆತ್ತಿಕಲ್ ನಲ್ಲಿ ಭೂ ಕುಸಿತದ ಆತಂಕ

ಮಂಗಳೂರು: ಶಿರೂರು ರೀತಿಯಲ್ಲೇ ಕೆತ್ತಿಕಲ್ ನಲ್ಲಿ ಭೂ ಕುಸಿತದ ಆತಂಕ

- Advertisement -
- Advertisement -

ಮಂಗಳೂರು: ಉತ್ತರಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಳಿಕ ಮಂಗಳೂರಿನ ಕೆತ್ತಿಕಲ್ ನಲ್ಲಿ ಕೂಡಾ ಈಗ ಆತಂಕದ ಸನ್ನಿವೇಶ ಸೃಷ್ಟಿಯಾಗಿದೆ.

ಮಂಗಳೂರಿನಿಂದ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮಂಗಳೂರಿನಿಂದ ಕಾರ್ಕಳ ತಾಲೂಕಿನ ಸಾಣೂರುವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕೆತ್ತಿಕಲ್ ಬಳಿ ಗುಡ್ಡ ಅಗೆದಿರುವ ಸ್ಥಳ ಅಪಾಯಕಾರಿಯಾಗಿದೆ.

ಮಳೆಯಿಂದಾಗಿ ಗುಡ್ಡ ಅಗೆದಿರುವ ಸ್ಥಳದಲ್ಲಿ ಮಣ್ಣು ಕುಸಿಯುವ ರೀತಿ ಇದ್ದು, ವಾಹನ ಸವಾರರು ಆತಂಕದಿಂದಲೇ ಸಂಚರಿಸುವಂತಾಗಿದೆ.

ಈ ಮಧ್ಯೆ ಗುಡ್ಡದ ಮೇಲ್ಭಾಗದಿಂದ ನೀರು ಹರಿದು ಬರುತ್ತಿದ್ದು, ಇದರಿಂದಾಗಿ ಗುಡ್ಡ ಕುಸಿದು ಬೀಳುವ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಅಲ್ಲದೇ, ನೀರಿನ ಹರಿವು ಹೆಚ್ಚಾದರೆ ಹೆದ್ದಾರಿಗೆ ಹಾಕಲಾಗಿರುವ ಮಣ್ಣು ಸಡಿಲವಾಗುವ ಭೀತಿ ಎದುರಾಗಿದೆ.

- Advertisement -

Latest News

error: Content is protected !!