Sunday, June 7, 2026
Homeಕರಾವಳಿಮಂಗಳೂರುಜುಲೈ 14 ರಂದು ಚೆನ್ನೈ ಯಲ್ಲಿ ವಿಭಾ ಶ್ರೀನಿವಾಸ್ ನಾಯಕ್ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ...

ಜುಲೈ 14 ರಂದು ಚೆನ್ನೈ ಯಲ್ಲಿ ವಿಭಾ ಶ್ರೀನಿವಾಸ್ ನಾಯಕ್ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ

- Advertisement -
- Advertisement -

ಮಂಗಳೂರು, ; ಚೆನ್ನೈ ನಗರದ ಸಂಯುಕ್ತ ಗೌಡ  ಸಾರಸ್ವತ ಸಭಾ ವತಿಯಿಂದ ಶ್ರೀ ಜೆ. ಎಸ್. ಪ್ರಭು ಹಾಗೂ  ಶ್ರೀಮತಿ ರಮಾಬಾಯಿ ಪ್ರಭು ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಜುಲೈ 14 ಭಾನುವಾರ ದಂದು ಸಂಜೆ 6 ಗಂಟೆಯಿಂದ 7.45 ರ ವರೆಗೆ ಚೆನ್ನೈ ಟಿ ನಗರದ ಮ್ಯೂಸಿಕ್ ಹಾಲ್ ನಲ್ಲಿ ನಡೆಯಲಿದೆ.

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್ ನಾಯಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಶಿರಸಿಯ ಭರತ್ ಹೆಗ್ಡೆ ಹಾರ್ಮೋನಿಯಂ ಹಾಗೂ ಮೂಡಬಿದಿರೆಯ ವಿಗ್ನೇಶ್ ಪ್ರಭು ತಬಲ ದಲ್ಲಿ ಸಾಥ್ ನೀಡಲಿದ್ದಾರೆ.ಸಂಯುಕ್ತ ಗೌಡ ಸಾರಸ್ವತ ಸಭಾ ಅಧ್ಯಕ್ಷ ಡಾ. ಎಸ್. ದಿನೇಶ್ ನಾಯಕ್ ಅವರು ಸಂಗೀತ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!