- Advertisement -
- Advertisement -
ಉಪ್ಪಿನಂಗಡಿ: ಇಲ್ಲಿನ ರಥಬೀದಿಯಲ್ಲಿರುವ ಗಣಪತಿ ಮಠದ ಬಳಿಯಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿರುವ ಕೂಸಪ್ಪ ಅವರಿಗೆ ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂಪಾಯಿ ಬಹುಮಾನ ಬಂದಿದೆ ಎಂಬ ಸುದ್ದಿ ಹರಡಿ ಅಭಿನಂದನೆಯ ಕರೆ, ಸಹಾಯ ಯಾಚನೆಯ ಕರೆಗೆ ಟೈಲರ್ ಹೈರಾಣಾಗುವಂತಾಗಿದೆ.
ಟೈಲರ್ ಕೂಸಪ್ಪ ಅವರಿಗೆ ಒಂದು ಕೋಟಿ ರೂಪಾಯಿ ಒಲಿದಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಅದರಲ್ಲಿ 30 ಲಕ್ಷ ರೂಪಾಯಿ ತೆರಿಗೆ ನೆಲೆಯಲ್ಲಿ ಕಡಿತಗೊಂಡು 70 ಲಕ್ಷ ರೂಪಾಯಿ ಅವರ ಖಾತೆಗೆ ಜಮೆಯಾಗಿದೆ ಎಂಬ ವಿವರ ಸೇರಿಸಿ ಬಾಯಿಯಿಂದ ಬಾಯಿಗೆ ಸಾಗಿತು.
ಇನ್ನು ಈ ಕುರಿತು ಮಾಧ್ಯಮದವರು ಕೂಸಪ್ಪ ಅವರನ್ನು ಭೇಟಿಯಾದಾಗ, ತನಗೆ ಯಾವ ಲಾಟರಿಯೂ ಲಭಿಸಿಲ್ಲ. ಇಂಥ ಸುದ್ದಿ ಹೇಗೆ ಸೃಷ್ಟಿಯಾಯಿತು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ನನಗೆ ದೂರವಾಣಿ ಕರೆಗಳಿಗೆ ಉತ್ತರಿಸಿ ಸಾಕುಸಾಕಾಗಿದೆ ಎಂದರು.
- Advertisement -