Thursday, June 4, 2026
Homeತಾಜಾ ಸುದ್ದಿಅಳಿಯನ ಸಾವಿನ ಕುರಿತು ಪ್ರತಿಕ್ರಯಿಸಿದ ಬಿ.ಸಿ.ಪಾಟೀಲ್

ಅಳಿಯನ ಸಾವಿನ ಕುರಿತು ಪ್ರತಿಕ್ರಯಿಸಿದ ಬಿ.ಸಿ.ಪಾಟೀಲ್

- Advertisement -
- Advertisement -

ಶಿವಮೊಗ್ಗ: ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯನ ಸಾವಿನ ಕುರಿತು, ‘ಪ್ರತಾಪ್ ಕಾಣೆಯಾದ ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ನಂತರ ಹೊನ್ನಾಳಿಯಲ್ಲಿ ಜೋಳಕ್ಕೆ ಬಳಸುವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು,’ ಎಂದು ಪ್ರತಿಕ್ರಯಿಸಿದರು.

ಸಹೋದರ ಮಧ್ಯಾಹ್ನ 1.45ಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ದೆವು. ಆದರೆ ಶಿವಮೊಗ್ಗ ಹತ್ತಿರ ಎಂದು ಇಲ್ಲಿಗೆ ಶಿಫ್ಟ್ ಮಾಡಿದ್ದಾರೆ ಎಂದರು.

‘ಬಿ.ಸಿ. ಪಾಟೀಲ್ ಅವರ ಮೊದಲ ಪುತ್ರಿ ಸೌಮ್ಯ ಹಾಗೂ ಪ್ರತಾಪ್ ಕುಮಾರ್ ಮದುವೆಯಾಗಿ 16 ವರ್ಷ ಆಗಿತ್ತು. ಮಕ್ಕಳಾಗದಿರುವ ವಿಚಾರದಲ್ಲಿ ಕೊರಗಿತ್ತು. ಡಿಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಕೆರೆಗಳಿಗೆ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ಅವರ ಅಂತ್ಯಕ್ರಿಯೆಯು ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ನಡೆಯಲಿದೆ,’ ಎಂದು ತಿಳಿಸಿದರು.

- Advertisement -

Latest News

error: Content is protected !!