- Advertisement -
![]()
- Advertisement -
ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುನಲ್ಲಿ, ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮರವೊಂದು ಮುರಿದು ಕಾರಿನ ಮೇಲೆ ಉರುಳಿ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಆಶಿಶ್ ಎಂಬವರ ಕಾರು ಇದಾಗಿದೆ. ಪಿಲಾರಿನ ಬಾಡಿಗೆ ಮನೆಯಲ್ಲಿ ನೆಲೆಸಿರುವ ಆಶಿಶ್ ತಮ್ಮ ಕಾರನ್ನ ಮನೆಯ ಹೊರಗಡೆಯ ಖಾಸಗಿ ಕಾಲಿ ಪ್ರದೇಶದಲ್ಲಿ ನಿಲ್ಲಿಸಿ ಮನೆಯೊಳಗೆ ತೆರಳಿದಾಕ್ಷಣವೇ ಗಾಳಿ, ಮಳೆಗೆ ಭಾರೀ ಗಾತ್ರದ ಮರವೊಂದು ಮುರಿದು ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆ ಸಂದರ್ಭ ಆಶಿಶ್ ಅವರು ಕಾರೊಳಗಡೆ ಇರದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಶಿಶ್ ಅವರ ಕಾರು ನಜ್ಜು, ಗುಜ್ಜಾಗಿದ್ದು ಸೋಮೇಶ್ವರ ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


