Saturday, June 6, 2026
Homeಕರಾವಳಿಮಂಗಳೂರುಪುತ್ತೂರು; ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ

ಪುತ್ತೂರು; ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ

- Advertisement -
- Advertisement -

ಪುತ್ತೂರು; ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಒಳಮೊಗ್ರ ಗ್ರಾಮದ ಕೈಕಾರ ಎಂಬಲ್ಲಿ ನಡೆದಿದೆ. ಕೈಕಾರ ನಿವಾಸಿ ಶುಭೋದಯ ಹಲ್ಲೆಗೊಳಗಾದವರು.

ಶುಭೋದಯ ಅವರು ಮನೆಗೆ ದಿನಸಿ ತರಲೆಂದು ಕೈಕಾರ ಜಂಕ್ಷನ್ ಗೆ ತೆರಳಿ ಖರೀದಿಸಿ ವಾಪಾಸ್ ಬರುವಾಗ ಕೈಕಾರ ಸರಕಾರಿ ಶಾಲೆಯ ಬಳಿ ಪರಿಚಯದ ರವೀಂದ್ರ ನಾಯ್ಕರವರು ಹಳೆಯ ದ್ವೇಷದಿಂದ ಅವಾಚ್ಯವಾಗಿ ಬೈದು, ಕೈಯ್ಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಅಕ್ಕನ ಗಂಡ ಶೇಖ‌ರ್ ಎಂಬವರು ಬರುವುದನ್ನು ನೋಡಿ ಹಲ್ಲೆ ನಡೆಸಿದ ರವಿಂದ್ರ ನಾಯ್ಕ ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ಶುಭೋದಯ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಕುರಿತು ಸಂಪ್ಯ ಠಾಣೆಯಲ್ಲಿ ಕಲಂ 324 504 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!