Monday, June 8, 2026
Homeಕರಾವಳಿಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ; ನೆಲ್ಯಾಡಿಯ ಎಂಜಿರದ ಯುವಕ ಸಾವು

ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ; ನೆಲ್ಯಾಡಿಯ ಎಂಜಿರದ ಯುವಕ ಸಾವು

- Advertisement -
- Advertisement -

ನೆಲ್ಯಾಡಿ; ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಭೀಕರ  ಅಪಘಾತ ಸಂಭವಿಸಿ ನೆಲ್ಯಾಡಿ ಸಮೀಪದ ಎಂಜಿರದ ಪರಕ್ಕಳದ ಯುವಕ ತೋಮಸ್ ಸಾವನ್ನಪ್ಪಿದ್ದಾರೆ.

ನರ್ಸಿಂಗ್ ವಿದ್ಯಾರ್ಥಿಯಾಗಿರುವ ಥೋಮಸ್ ಎಂಜಿರದ ಪರಕ್ಕಳದ ಸ್ಕರಿಯಾ ಅಲಿಯಾಸ್‌ ಬೇಬಿ ಎಂಬವರ ಪುತ್ರ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ತೋಮಸ್‌ ಮನೆಯಿಂದ ಬೈಕ್ ನಲ್ಲಿ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ನೆಲಮಂಗಲದಲ್ಲಿ ಮುಂದೆ ಸಾಗುತ್ತಿದ್ದ ಗ್ಯಾಸ್‌ ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದ್ದು, ಎದೆಭಾಗ ಮತ್ತು ಕೈಗಳಿಗೆ ತೀವ್ರವಾಗಿ ಗಾಯವಾಗಿತ್ತು. ಅಪಘಾತದ ಕೆಲವೇ ಕ್ಷಣದಲ್ಲಿ ತೋಮಸ್ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!