Friday, June 26, 2026
Homeತಾಜಾ ಸುದ್ದಿಜುಲೈ 12ಕ್ಕೆ ಅನಂತ್ ಅಂಬಾನಿ– ರಾಧಿಕಾ ವಿವಾಹ: ಮದುವೆಗೆ ಭಾಗಿಯಾಗುವ ಅತಿಥಿಗಳಿಗೆ ವಿಶೇಷ ಡ್ರೆಸ್‌ಕೋಡ್

ಜುಲೈ 12ಕ್ಕೆ ಅನಂತ್ ಅಂಬಾನಿ– ರಾಧಿಕಾ ವಿವಾಹ: ಮದುವೆಗೆ ಭಾಗಿಯಾಗುವ ಅತಿಥಿಗಳಿಗೆ ವಿಶೇಷ ಡ್ರೆಸ್‌ಕೋಡ್

- Advertisement -
- Advertisement -

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ.

ಈ ಜೋಡಿಯ ವಿವಾಹವು ಜುಲೈ 12ರಿಂದ  3 ದಿನಗಳ ವಿವಾಹ ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ ನೆರವೇರಲಿದೆ. ವಿವಾಹವನ್ನು ಹಿಂದೂ ವೈದಿಕ ಸಂಪ್ರದಾಯದಂತೆ ನಡೆಸಲಾಗುತ್ತದೆ.

ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ‘ಶುಭ ವಿವಾಹ’ ನೆರವೇರಲಿದೆ. 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಜುಲೈ 14ರಂದು ಮಂಗಳ ಉತ್ಸವ ಅಥವಾ ಆರತಕ್ಷತೆ ನಡೆಯಲಿದೆ ಎಂದು ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.ಈ ಮದುವೆ ಮಹೋತ್ಸವಕ್ಕೆ ಆಗಮಿಸುವವರಿಗೆ ವಸ್ತ್ರ ಸಂಹಿತೆ ಇದ್ದು, ಮೊದಲ ದಿನ ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ‘ಶುಭ ವಿವಾಹ’ಕ್ಕೆ ಬರುವವರು ಭಾರತದ ಸಾಂಪ್ರದಾ ಯಿಕ ಉಡುಗೆ ತೊಡಬೇಕು.

https://x.com/ANI/status/1796075141538934887/photo/1

2ನೇ ದಿನ ಜುಲೈ 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮದಲ್ಲಿ ಭಾರತೀಯ ಫಾರ್ಮಲ್ ಉಡುಗೆ ತೊಡಬೇಕು. 3ನೇ ದಿನ ಜುಲೈ 14ರಂದು ಆರತಕ್ಷತೆಗೆ ಬರುವವರು ಸೀರೆ, ಲೆಹಂಗಾ, ಶೇರ್ವಾನಿಯಂತಹ ‘ಇಂಡಿಯನ್ ಚಿಕ್’ ಉಡುಗೆಗಳನ್ನು ತೊಟ್ಟು ಬರಬೇಕಿದೆ.

- Advertisement -

Latest News

error: Content is protected !!