Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಮರುವಾಯಿ ಹೆಕ್ಕಲು ಹೋದ ಯುವಕ ನೀರುಪಾಲು

ಮಂಗಳೂರು; ಮರುವಾಯಿ ಹೆಕ್ಕಲು ಹೋದ ಯುವಕ ನೀರುಪಾಲು

- Advertisement -
- Advertisement -

ಮಂಗಳೂರು; ಮರುವಾಯಿ ಹೆಕ್ಕಲು ಹೋದ ಯುವಕ ನೀರುಪಾಲಾಗಿರುವ ಘಟನೆ ನಡೆದಿದೆ.ಬಜ್ಪೆ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಮೃತ ದುರ್ದೈವಿ.
ಬಜ್ಪೆಯ ಅದ್ಯಪಾಡಿಯ ಸುಮಾರು 10 ಯುವಕರ ತಂಡ ಮರುವಾಯಿ ಹೆಕ್ಕಲು ಕೊಳಚಿಕಂಬಳ ಬಳಿ ಆಗಮಿಸಿತ್ತು. ಅದರಲ್ಲಿ ನಾಲ್ವರು ಮರುವಾಯಿ ಹೆಕ್ಕುವುದಕ್ಕಾಗಿ ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಅಳಿವೆಯ ಬಳಿ ನದಿಗೆ ಇಳಿದಿದ್ದರು. ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು. ನೀರಿಗೆ ಇಳಿದವರಲ್ಲಿ ಈಜು ಬಾರದ ಕಾರಣ ಕೆಲವು ಯುವಕರು ನೀರಿನಲ್ಲಿ ಮುಳುಗಡೆಯಾಗುವ ಹಂತಕ್ಕೆ ಹೋಗಿದ್ದರು. ಈ ವೇಳೆ ಅಭಿಲಾಷ್‌ (24) ಉಳಿದವರನ್ನು ಬದುಕಿಸಲು ಹೋಗಿ ತಾನು ಜೀವ ಕಳೆದುಕೊಂಡಿದ್ದಾರೆ. ಯುವಕರ ಬೊಬ್ಬೆ ಕೇಳಿ ಧಾವಿಸಿ ಬಂದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ನೀರುಪಾಲಾಗಿರುವ ಅಭಿಲಾಷ್‌ ಪತ್ತೆಯಾಗಿಲ್ಲ.

- Advertisement -

Latest News

error: Content is protected !!