Sunday, June 7, 2026
Homeಕರಾವಳಿಉಡುಪಿಉಡುಪಿ : ಕರ್ಕಶ ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ ಬಸ್ ಚಾಲಕ; ಇರಿಟೇಟ್ ಆಗಿ...

ಉಡುಪಿ : ಕರ್ಕಶ ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ ಬಸ್ ಚಾಲಕ; ಇರಿಟೇಟ್ ಆಗಿ ಡ್ರೈವರಿಗೆ  ಚಾಕುವಿನಿಂದ ಇರಿದ ಕಾರು ಚಾಲಕ

- Advertisement -
- Advertisement -

ಉಡುಪಿ : ಬಸ್ ಚಾಲಕ ಕರ್ಕಶ ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ್ದಕ್ಕೆ ಇರಿಟೇಟ್ ಆಗಿ ಬಸ್ ಡ್ರೈವರಿಗೆ  ಕಾರು ಚಾಲಕ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಇರಿತಕ್ಕೊಳಗಾದ ಬಸ್  ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್   ಪಡುಬಿದ್ರೆ ಯ ಎರ್ಮಾಳ್ ಬಳಿ ಮುಂದಿನ ನಿಂದ ಹೋಗುತ್ತಿದ್ದ ಕಾರು ಚಾಲಕನಿಗೆ ಹಾರ್ನ್ ಹಾಕಿ ಓವರ್ ಡೇಕ್ ಮಾಡಲು ಯತ್ನಿಸಿದ್ದಾನೆ. ಬಸ್ಸಿನ ಕರ್ಕಶ ಹಾರ್ನ್‌ಗೆ  ಆಕ್ರೋಶಗೊಂಡ ಕಾರು ಚಾಲಕ ಬಸ್ಸನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಇರಿದು ಬಳಿಕ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ ಎಂದು  ಹೇಳಲಾಗಿದೆ.

ಗಾಯಗೊಂಡ ಬಸ್ ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಬಗ್ಗೆ ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ .

- Advertisement -

Latest News

error: Content is protected !!