Wednesday, June 3, 2026
Homeಕರಾವಳಿಬೈಕಂಪಾಡಿಯಲ್ಲಿ ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

ಬೈಕಂಪಾಡಿಯಲ್ಲಿ ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

- Advertisement -
- Advertisement -

ಬೈಕಂಪಾಡಿ: ಹೋಟೆಲ್ ಶ್ರೀ ದ್ವಾರ ಬಳಿ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಒಂದು ಲಾರಿ ಗ್ರಾನೈಟ್ ಮಳಿಗೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಗ್ರಾನೆಟ್ ಗೆ ಹಾನಿಯಾಗಿದೆ. ಮಂಗಳೂರಿನಿಂದ ಮಲ್ಪೆಗೆ ಮೀನು ಸಾಗಾಟ ಮಾಡುತ್ತಿದ್ದ ಹಳೆಯ ಲಾರಿ ಸಂಪೂರ್ಣ ಹಾನಿಗೀಡಾಗಿದೆ. ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಮಹಿಳಾ ಮೀನುಗಾರರು ನಿತ್ಯ ಮೀನು ಮಾರಾಟಕ್ಕೆ ಕುಳಿತುಕೊಳ್ಳುತ್ತಿದ್ದು, ಭಾರಿ ಅಪಾಯವೊಂದು ತಪ್ಪಿದಂತಾಗಿದೆ.

ಇಲ್ಲಿ ಹೆದ್ದಾರಿಯ ನಡುವೆ ಡಿವೈಡರ್ ಒಂದನ್ನು ನೀಡಲಾಗಿದ್ದು, ಅಜಾಗರೂಕತೆಯ ಚಾಲನೆ ಮಾಡಿದಲ್ಲಿ ಅಪಾಯ ತಪ್ಪಿದ್ದಲ್ಲ. ಸರ್ವಿಸ್ ರಸ್ತೆಯೂ ಇಲ್ಲದಿರುವುದರಿಂದ ಈ ಹೆದ್ದಾರಿ ಬದಿ ಅಪಘಾತ ಪ್ರಕರಣಗಳು ಹೆಚ್ಚಿವೆ.

- Advertisement -

Latest News

error: Content is protected !!