Saturday, June 6, 2026
Homeಕರಾವಳಿಮಂಗಳೂರುಮಕ್ಕಳೊಂದಿಗೆ ಪುತ್ತೂರು ಜಾತ್ರೆಗೆ ಹೋಗಿ ಮರಳುತ್ತಿದ್ದಾಗ ಬೈಕ್ ಗೆ ಜೀಪ್ ಡಿಕ್ಕಿ; ಅಪ್ಪ ಸಾವು, ಮಕ್ಕಳಿಬ್ಬರಿಗೆ...

ಮಕ್ಕಳೊಂದಿಗೆ ಪುತ್ತೂರು ಜಾತ್ರೆಗೆ ಹೋಗಿ ಮರಳುತ್ತಿದ್ದಾಗ ಬೈಕ್ ಗೆ ಜೀಪ್ ಡಿಕ್ಕಿ; ಅಪ್ಪ ಸಾವು, ಮಕ್ಕಳಿಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು: ಮಕ್ಕಳೊಂದಿಗೆ ಪುತ್ತೂರು ಜಾತ್ರೆಗೆ ಹೋಗಿ ಮರಳುತ್ತಿದ್ದಾಗ ಬೈಕ್ ಗೆ ಜೀಪ್ ಡಿಕ್ಕಿಯಾಗಿ ಅಪ್ಪ ಸಾವನ್ನಪ್ಪಿ, ಮಕ್ಕಳಿಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಮೃತ ದುರ್ದೈವಿ, ಲೋಕೇಶ್ ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದಾಗ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಬೈಕ್ ಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 5೦ ಮೀಟರ್ ದೂರದ ತನಕ ಬೈಕನ್ನು ಎಳೆದುಕೊಂಡು ಹೋಗಿದೆ.ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಲೊಕೇಶ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!