Wednesday, May 1, 2024
Homeತಾಜಾ ಸುದ್ದಿಬೆಳ್ತಂಗಡಿ : ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ; ಮಹಿಳೆಯ ತಲೆ ಭಾಗ ಸೀಳಿ...

ಬೆಳ್ತಂಗಡಿ : ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ; ಮಹಿಳೆಯ ತಲೆ ಭಾಗ ಸೀಳಿ ಹಾಕಿ ,ಕೈಗೆ ಗಂಭೀರ ಗಾಯ

spot_img
- Advertisement -
- Advertisement -

ಬೆಳ್ತಂಗಡಿ : ತನ್ನ ಮನೆಯ ಸಾಕು ನಾಯಿ ಜೊತೆ ಮನೆ ಮಾಲಕಿ ಮುದ್ದಾಡುವಾಗ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಎ.18 ರಂದು ಮಧ್ಯಾಹ್ನ ನಡೆದಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ. ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ.

ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜೊತೆ ಎಂದಿನಂತೆ ಎ.18 ರಂದು ಮುದ್ದಾಡುತ್ತಿದ್ದರು. ಈ ವೇಳೆ ಮಹಿಳೆ  ಕಾಲು ಜಾರಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು. ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ. ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ‌.

- Advertisement -
spot_img

Latest News

error: Content is protected !!