Friday, June 5, 2026
Homeಕರಾವಳಿಮಂಗಳೂರು; ಮನೆಗೆ ನುಗ್ಗಿ ಕಳ್ಳತನ ಪ್ರಕರಣ;ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು; ಮನೆಗೆ ನುಗ್ಗಿ ಕಳ್ಳತನ ಪ್ರಕರಣ;ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರಿನ ಬಡಗ ಎಡಪದವು ತಿಪ್ಪಬೆಟ್ಟುವ ಯುವರಾಜ್ ಆಚಾರ್ಯ ಎಂಬವರ ಮನೆಯ ಬೀಗ ಮುರಿದು ಗೃಹೋಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.ಬಡಗ ಎಡಪದವು ಗ್ರಾಮದ ನಿವಾಸಿ ರವಿ ಶೆಟ್ಟಿ (55), ಮೂಡುಬಿದಿರೆ ತೋಡಾರು ಗ್ರಾಮದ ನಿವಾಸಿ ಶಿವಪ್ರಸಾದ್ ಶೆಟ್ಟಿ (29) ಬಂಧಿತರು.

ಇನ್ನು ಬಂಧಿತರಿಂದ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 1.40 ಲಕ್ಷ ರೂ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕರಾದ ನಂದೀಶ್ವರ ಬಿ ಕುಂಬಾರ ಪಿಎಸ್‌ಐಗಳಾದ ಗುರಪ್ಪ ಕಾಂತಿ, ರೇವಣಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್, ಎಎಸ್‌ಐ ರಾಮ ಪೂಜಾರಿ ಮತ್ತು ಸಿಬ್ಬಂದಿ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನಿ, ಬಸವರಾಜ ಪಾಟೀಲ್, ಪ್ರಕಾಶ್, ಚಿದಾನಂದ ಮೊದಲಾದವರು ಭಾಗವಹಿಸಿದ್ದರು.

- Advertisement -

Latest News

error: Content is protected !!