Wednesday, May 8, 2024
Homeಕರಾವಳಿಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಮುಡಾ ಕಮಿಷನರ್ ಲೋಕಾ ಬಲೆಗೆ ಬಿದ್ದ ಪ್ರಕರಣ; ಮನ್ಸೂರ್ ಅಲಿ ಮತ್ತು...

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಮುಡಾ ಕಮಿಷನರ್ ಲೋಕಾ ಬಲೆಗೆ ಬಿದ್ದ ಪ್ರಕರಣ; ಮನ್ಸೂರ್ ಅಲಿ ಮತ್ತು ಬ್ರೋಕರ್ ಮುಹಮ್ಮದ್ ಸಲೀಂಗೆ ಜಾಮೀನು ನೀಡಲು ಕೋರ್ಟ್ ನಿರಾಕರಣೆ

spot_img
- Advertisement -
- Advertisement -

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದ ಮುಡಾ ಕಮಿಷನರ್ ಮನ್ಸೂರ್ ಅಲಿ ಮತ್ತು ಬ್ರೋಕರ್ ಮುಹಮ್ಮದ್ ಸಲೀಂ ಅವರಿಗೆ ಏಪ್ರಿಲ್ 05 ರಂದು ಜಾಮೀನು ನೀಡಲು ಮಂಗಳೂರಿನ ನ್ಯಾಯಾಲಯ ನಿರಾಕರಿಸಿದೆ.

ಮನ್ಸೂರ್ ಅಲಿ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಮಾರ್ಚ್ 23 ರಂದು ಬ್ರೋಕರ್ ಸಲೀಂ ಸಹಿತ ಬಂಧಿಸಿದ್ದರು.ಇಬ್ಬರನ್ನೂ ಭ್ರಷ್ಟಾಚಾರ ತಡೆ ಕಾಯ್ದೆ, 1988 ಮತ್ತು 2018 ರಲ್ಲಿ ಅದರ ತಿದ್ದುಪಡಿಯ ಸೆಕ್ಷನ್ 7 (ಎ) ಅಡಿಯಲ್ಲಿ ಬಂಧಿಸಲಾಗಿತ್ತು.

ಅಲಿ ಮತ್ತು ಸಲೀಂರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏ. 8 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಬ್ಬರೂ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಾಮೀನು ಅರ್ಜಿಯನ್ನು ಪರಿಶೀಲಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ಜಾಮೀನು ನಿರಾಕರಿಸಿದ್ದಾರೆ.ಲೋಕಾಯುಕ್ತರ ಪರವಾಗಿ ಹೆಚ್ಚುವರಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು.

- Advertisement -
spot_img

Latest News

error: Content is protected !!