Saturday, June 6, 2026
Homeಅಪರಾಧಪಡೆದ ಸಾಲ ಹಿಂದೆ ಕೇಳಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ

ಪಡೆದ ಸಾಲ ಹಿಂದೆ ಕೇಳಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ

- Advertisement -
- Advertisement -

ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆ ಸಮೀಪದ ಸಂಗಬೆಟ್ಟಿನಲ್ಲ  ಪಡೆದ ಸಾಲವನ್ನು ಹಿಂದೆ ಕೇಳಿದ್ದಕ್ಕೆ ಆಕ್ರೋಶಗೊಂಡು ಸಾಲಗಾರ ಸಾಲ ನೀಡಿದಾತನ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸಂಗಬೆಟ್ಟು ಗ್ರಾಮದ ಕೊಮ್ಮಡ ನಿವಾಸಿ ವಿಕ್ಟರ್‌ ಪಲೇರಾ ಅವರು ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಪ್ರಕರಣದ ಕುರಿತು ಬಾಕಿಮಾರು ನಿವಾಸಿ ಲಾರೆನ್ಸ್‌ ಡಿಕೊಸ್ತಾ ಅವರು ದೂರು ನೀಡಿದ್ದಾರೆ.

ಸುಮಾರು 5 ವರ್ಷಗಳ ಹಿಂದೆ ಲಾರೆನ್ಸ್‌ ಅವರು ವಿಕ್ಟರ್‌ಗೆ 15 ಸಾವಿರ ರೂ. ಸಾಲ ನೀಡಿದ್ದು, ಸಾಕಷ್ಟು ಬಾರಿ ಕೇಳಿದರೂ ಅದನ್ನು ಹಿಂದಿರುಗಿಸಿರಲಿಲ್ಲ. ಪದೇ ಪದೇ ಸಾಲ ಕೇಳುತ್ತಿದ್ದಾರೆ ಎಂದು ಆರೋಪಿ ವಿಕ್ಟರ್‌ನು ಲಾರೆನ್ಸ್‌ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!