Monday, June 8, 2026
Homeಕರಾವಳಿಮಂಗಳೂರು ಮಂಡಲದ ನೂತನ ಬಿಜೆಪಿಯ ಕಾರ್ಯಾಲಯ ಉದ್ಘಾಟನೆ

ಮಂಗಳೂರು ಮಂಡಲದ ನೂತನ ಬಿಜೆಪಿಯ ಕಾರ್ಯಾಲಯ ಉದ್ಘಾಟನೆ

- Advertisement -
- Advertisement -

ಉಳ್ಳಾಲ: ತೊಕ್ಕೊಟ್ಟು ಕಲ್ಲಾಪುವಿನ ಶ್ರೀ ಕೋರ್ದಬ್ಬು ದೈವಸ್ಥಾನ ಬಳಿಯ ಕಟ್ಟಡದಲ್ಲಿ ಲೋಕಸಭಾ ಚುನಾವಣಾ ಮಂಗಳೂರು ಮಂಡಲ ಕಾರ್ಯಾಲಯವನ್ನು ಗುರುವಾರದಂದು ಸಂಸದ ನಳಿನ್ ಕುಮಾರ್ ಉದ್ಘಾಟಿಸಿದರು.

ನಂತರದಲ್ಲಿ ಮಾತನಾಡಿದ ಅವರು, ‘ಮೋದಿ ಸರ್ಕಾರ ₹ 1,13,000 ಕೋಟಿ ಅನುದಾನ ಜಿಲ್ಲೆಯ ಅಭಿವೃದ್ಧಿಗೆ 10 ವರ್ಷಗಳಲ್ಲಿ ನೀಡಿದೆ. ₹ 3000 ಕೋಟಿ ಮಂಗಳೂರು ಕ್ಷೇತ್ರಕ್ಕೆ ಬಂದಿದೆ. ಅಭಿವೃದ್ಧಿ ವಿಷಯದಲ್ಲಿ ನನ್ನ ಹೆಸರು ಹೇಳುವುದು ಬೇಡ, ಮೋದಿ ಹೆಸರು ಹೇಳಿಕೊಂಡು ಪ್ರಚಾರ ಮಾಡಿ. ಇನ್ನು ಕಾಂಗ್ರೆಸ್‌ನವರು ಮಾಡಿದ ಕೆಲಸಕ್ಕಿಂತ 10 ಪಟ್ಟು ಪ್ರಚಾರ ಪಡೆದುಕೊಳ್ಳುವರು. ಕ್ಷೇತ್ರದಲ್ಲಿ ಖಾದರ್ ಫೊಟೊ ಹಾಕಿದ್ದರೂ ಅದರ ಹಿಂದೆ ಇರುವುದು ಕೇಂದ್ರ ಸರ್ಕಾರದ ಹಣ ಎಂದು,’ ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ತೊಕ್ಕೊಟ್ಟುವಿನಲ್ಲಿ ಮಂಗಳೂರು ಮಂಡಲ ಬಿಜೆಪಿ ಕಚೇರಿಗೆ ಶಾಶ್ವತ ಕಟ್ಟಡ ನಿರ್ಮಿಸುವ ಉದ್ದೇಶವಿದೆ ಎಂದರು.

ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಕ್ಷೇತ್ರ ಉಸ್ತುವಾರಿ ರಾಧಾಕೃಷ್ಣ ರೈ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ವಕ್ತಾರ ಮೋಹನರಾಜ್ ಕೆ.ಆರ್, ರಾಜ್ಯ ಮೀನುಗಾರ ಪ್ರಕೋಷ್ಠದ ಸಹಸಂಚಾಲಕ ಯಶವಂತ್ ಅಮೀನ್, ಸುಜಿತ್ ಮಾಡೂರು ಉಪಸ್ಥಿತರಿದ್ದರು.

- Advertisement -

Latest News

error: Content is protected !!