Saturday, June 6, 2026
Homeಕರಾವಳಿಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ; ದೂರು ದಾಖಲು

ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ; ದೂರು ದಾಖಲು

- Advertisement -
- Advertisement -

ಬಂಟ್ವಾಳ: ಇಲ್ಲಿನ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರರೊಬ್ಬರು ಮಾ. 27ರ ಮಧ್ಯಾಹ್ನದಿಂದ ಕರ್ತವ್ಯಕ್ಕೂ ಹಾಜರಾಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ವ್ಯಕ್ತಿ ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ, ಬೆಳ್ತಂಗಡಿಯ ಕೊಲ್ಪೆದಬೈಲು ನಿವಾಸಿ ಲಕ್ಷ್ಮೀನಾರಾಯಣ. ಅವರ ಮೊಬೈಲ್‌ ಫೋನ್‌ ಸ್ವಿಚ್ಡ್ ಆಫ್‌ ಬರುತ್ತಿದೆ ಎನ್ನಲಾಗಿದೆ.

ಅವರು ಎಸ್‌ಎಸ್‌ಟಿ ತಂಡದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಮಾ. 27ರಂದು ಮಧ್ಯಾಹ್ನದ ಬಳಿಕ ತಮ್ಮ ಕಚೇರಿಯಿಂದ ತೆರಳಿದ್ದರು. ಅಲ್ಲಿಂದ ಅವರು ಮನೆಗೂ ಹೋಗಿಲ್ಲ. ಹೀಗಾಗಿ ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಜತೆಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿದೆ.

ಪ್ರಸ್ತುತ ಅವರ ಬೈಕ್‌ ಹಾಗೂ ಮೊಬೈಲ್‌ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದು, ಆದರೆ ವ್ಯಕ್ತಿ ಪತ್ತೆಯಾಗಿಲ್ಲ. ಈ ಹಿಂದೆಯೂ ಅವರು ಇದೇ ರೀತಿ ನಾಪತ್ತೆಯಾಗಿ ಬಳಿಕ ಪೊಲೀಸರ ಶೋಧದ ಬಳಿಕ ಪತ್ತೆಯಾಗಿದ್ದರು. ಪ್ರಸ್ತುತ ಪುಂಜಾಲಕಟ್ಟೆ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

- Advertisement -

Latest News

error: Content is protected !!