Sunday, April 28, 2024
Homeಕರಾವಳಿಸುಳ್ಯ:ಕೂಜಿಮಲೆ ಎಸ್ಟೇಟ್ ಸಮೀಪ ನಕ್ಸಲ್ ಮಹಿಳೆ ಕಾಣಿಸಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸುಳ್ಯ:ಕೂಜಿಮಲೆ ಎಸ್ಟೇಟ್ ಸಮೀಪ ನಕ್ಸಲ್ ಮಹಿಳೆ ಕಾಣಿಸಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

spot_img
- Advertisement -
- Advertisement -

ಸುಳ್ಯ:ಕೂಜಿಮಲೆ ಎಸ್ಟೇಟ್ ಸಮೀಪ ನಕ್ಸಲ್ ಮಹಿಳೆ ಕಾಣಿಸಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಕೂಜಿಮಲೆ ಎಸ್ಟೇಟ್ ಬಳಿ ಅಪರಿಚಿತ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದಾರೆ ಎಂ ಬ ಸುದ್ದಿ ಹಬ್ಬುತ್ತಿದ್ದಂತೆ ಅದು ನಕ್ಸಲ್ ಮಹಿಳೆ ಇರಬೇಕು ಅನ್ನೋ ಶಂಕೆ ವ್ಯಕ್ತವಾಗಿತ್ತು,

ಅದರಂತೆ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆಯೂ ಚುರುಕುಗೊಂಡಿತ್ತು. ತಡ ರಾತ್ರಿ ಸುಮಾರು ಎರಡು ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ  ಸಿಬ್ಬಂದಿ ಮಹಿಳೆಯನ್ನು ಪತ್ತೆ ಹಚ್ಚಿ ಮಾಹಿತಿ ಕಲೆ ಹಾಕಿದ್ದಾರೆ.

ಈಕೆ ನಕ್ಸಲ್ ಗುಂಪಿಗೆ ಸೇರಿದವರು ಎಂದು ಸುದ್ದಿಯಾದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಮಡಿಕೇರಿ ಗ್ರಾಮಾಂತರ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದರು. ಸಮಗ್ರ ವಿಚಾರಣೆಯ ಬಳಿಕ  ಈ ಮಹಿಳೆ  ನಕ್ಸಲ್ ಗುಂಪಿಗೆ ಸೇರಿದವರಲ್ಲ  ಬದಲಾಗಿ  ರಾಜಸ್ಥಾನ್ ಮೂಲದ ಮಹಿಳೆಯಾಗಿದ್ದು ಮಾನಸಿಕ ಅಸ್ವಸ್ಥರಾಗಿರುವುದಾಗಿ ತಿಳಿದು ಬಂದಿದೆ.  

ಇದೀಗ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಮಾಧ್ಯಮಗಳಲ್ಲಿ  ಪ್ರಕಟಗೊಂಡ  ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದ ಪೊಲೀಸ್ಅಧಿಕಾರಿಗಳು  ಕೊಡಗು ಜಿಲ್ಲಾ ಪೊಲೀಸ್ ಹಾಗೂ ಏ. ಎನ್.ಎಫ್ ತಂಡ  ಪರಿಸ್ಥಿತಿಯನ್ನು  ಎದುರಿಸಲು ಸನ್ನದ್ಧವಾಗಿದೆ  ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!