Saturday, June 6, 2026
Homeತಾಜಾ ಸುದ್ದಿ14 ತಿಂಗಳ ಮಗುವನ್ನು ಮಲಗಿಸಿ ಸ್ನಾನಕ್ಕೆ ತೆರಳಿದ್ದ ದಂಪತಿ; 20 ನಿಮಿಷದಲ್ಲಿ ವಾಪಾಸ್ ಬರುವಾಗ ಮಗು...

14 ತಿಂಗಳ ಮಗುವನ್ನು ಮಲಗಿಸಿ ಸ್ನಾನಕ್ಕೆ ತೆರಳಿದ್ದ ದಂಪತಿ; 20 ನಿಮಿಷದಲ್ಲಿ ವಾಪಾಸ್ ಬರುವಾಗ ಮಗು ಕಳ್ಳತನ

- Advertisement -
- Advertisement -

ಹಾಸನ: 14 ತಿಂಗಳ ಹೆಣ್ಣು ಮಗುವನ್ನು ಗುಡಿಸಲಲ್ಲಿ ಮಲಗಿಸಿ ದಂಪತಿ ಸ್ನಾನಕ್ಕೆ ತೆರಳಿದ್ದ ವೇಳೆ ಮಗುವನ್ನು ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಮಳಲಿ ಗ್ರಾಮದಲ್ಲಿ ನಡೆದಿದೆ.

ಮಧ್ಯಪ್ರದೇಶ ರಾಜ್ಯದ, ಸತ್ಮ ಜಿಲ್ಲೆ, ವೀರ್‌ಸಿಂಗ್‌ಪುರ್ ತಾಲೂಕಿನ ಸಂಜು ಮತ್ತು ರೋಹಿತ್ ದಂಪತಿಯ ಹದಿನಾಲ್ಕು ತಿಂಗಳ ಹೆಣ್ಣು ಮಗು  ಕೀರ್ತಿಯನ್ನು ಪಾಪಿಗಳು ಕದ್ದೊಯ್ದಿದ್ದಾರೆ.ಸಂಜು ಮತ್ತು ರೋಹಿತ್ ದಂಪತಿ 3 ತಿಂಗಳ ಹಿಂದೆ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು. ನಿನ್ನ ಕೆಲಸ ಮುಗಿಸಿ ಮನೆಯಲ್ಲಿ ಪುಟ್ಟ ಕಂದಮ್ಮಗಳನ್ನು ಮಲಗಿಸಿ ದಂಪತಿ ಸ್ನಾನಕ್ಕೆ ನದಿಗೆ ತೆರಳಿದ್ದರು. ಇಪ್ಪತ್ತು ನಿಮಿಷದ ಬಳಿಕ ಮನೆಗೆ ವಾಪಾಸ್ ಆದಾಗ ಮಗುವನ್ನು ಕದ್ದಿದ್ದಾರೆ.

ಮಗು ಹುಡುಕಿ‌ ಕೊಡುವಂತೆ ಸಕಲೇಶಪುರ ಪೊಲೀಸ್ ಠಾಣೆಗೆ ದಂಪತಿ ದೂರು  ಕೊಟ್ಟಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!