Wednesday, June 24, 2026
Homeತಾಜಾ ಸುದ್ದಿಚುನಾವಣೆಗೆ ಅಗತ್ಯವಿರುವಷ್ಟು ನನ್ನಲ್ಲಿ ಹಣವಿಲ್ಲ; ಹಣದ ಕೊರತೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ನಿರ್ಮಲಾ ಸೀತಾರಾಮನ್‌

ಚುನಾವಣೆಗೆ ಅಗತ್ಯವಿರುವಷ್ಟು ನನ್ನಲ್ಲಿ ಹಣವಿಲ್ಲ; ಹಣದ ಕೊರತೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ನಿರ್ಮಲಾ ಸೀತಾರಾಮನ್‌

- Advertisement -
- Advertisement -

ಹೊಸದಿಲ್ಲಿ: ಮಾಧ್ಯಮವೊಂದರ ಸಂದರ್ಶನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ಚುನಾವಣೆಗೆ ಅಗತ್ಯವಿರುವಷ್ಟು ಹಣ ನನ್ನ ಬಳಿ ಇಲ್ಲ. ನನ್ನ ಸಂಪಾದನೆ, ನನ್ನ ಉಳಿತಾಯ, ನನ್ನ ಸ್ವಂತದ್ದಷ್ಟೇ ನನ್ನ ಆಸ್ತಿ. ದೇಶದ ಹಣ ನನ್ನದಾಗಲು ಸಾಧ್ಯವಿಲ್ಲ. ಹೀಗಾಗಿ ಹಣದ ಕೊರತೆ ಇಂದ ನಾನು ಸ್ಪರ್ಧಿಸುತ್ತಿಲ್ಲ’ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿ ಸುವ ಅವಕಾಶವನ್ನು ಬಿಜೆಪಿ ನೀಡಿತ್ತು. ಆದರೆ ಚುನಾವಣೆಯಲ್ಲಿ ಹೋರಾಡಲು ಅಗತ್ಯವಿರುವಷ್ಟು ಹಣ ನನ್ನ ಬಳಿ ಇಲ್ಲದ ಕಾರಣಕ್ಕೆ ನಾನೇ ಪ್ರಸ್ತಾವವನ್ನು ತಿರಸ್ಕರಿಸಿದ್ದೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಹೇಳಿದ್ದಾರೆ.

“ಇದರ ಜತೆಗೆ ಯಾವ ರಾಜ್ಯದ ಯಾವ ಕ್ಷೇತ್ರ ಆಯ್ದುಕೊಳ್ಳಬೇಕೆಂಬ ಗೊಂದಲ, ಗೆಲುವಿಗಾಗಿ ಅನುಸರಿಸುವ ಕೆಲವು ಮಾನದಂಡ ಯಾವ ಧರ್ಮ, ಯಾವ ಜಾತಿ, ಯಾವ ಸಮುದಾಯ ಎಂಬುದೆಲ್ಲ ನನ್ನಿಂದ ಸಾಧ್ಯವಾಗದು ಎನಿಸಿತು. ಹಾಗಾಗಿ ನಾನೇ ಈ ಪ್ರಸ್ತಾವ ತಿರಸ್ಕರಿಸಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

- Advertisement -

Latest News

error: Content is protected !!