Friday, October 16, 2026
Homeಕರಾವಳಿಉಡುಪಿಉಡುಪಿ: ಅಲೆಗಳ ಹೊಡೆತಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಿಸಿದ ಈಶ್ವರ್ ಮಲ್ಪೆ

ಉಡುಪಿ: ಅಲೆಗಳ ಹೊಡೆತಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಿಸಿದ ಈಶ್ವರ್ ಮಲ್ಪೆ

- Advertisement -
- Advertisement -

ಉಡುಪಿ: ಅಲೆಗಳ ಹೊಡೆತಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಿಸಿದ ಈಶ್ವರ್ ಮಲ್ಪೆ ರಕ್ಷಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಬೀಚ್‌ಗೆ ಬಂದ ಮೈಸೂರು ಮೂಲದ ದಂಪತಿ ಸ್ನಾನಕ್ಕೆಂದು ಮಗುವಿನೊಂದಿಗೆ ನೀರಿಗಿಳಿದಿದ್ದರು.

ಸ್ನಾನ ಮಾಡುತ್ತಿರುವ ವೇಳೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಮಲ್ಪೆ ಬೀಚ್‌ ಆಟೋರಿಕ್ಷಾ ನಿಲ್ದಾಣದ ಚಾಲಕರು ಈಶ್ವರ ಮಲ್ಪೆ ಅವರ ಆಂಬ್ಯುಲೆನ್ಸ್ ವರೆಗೆ ಮಗುವನ್ನು ಅಟೋರಿಕ್ಷಾದಲ್ಲಿ ಕರೆತಂದರು.

ತತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್‌ ತಂಡ ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಸದ್ಯ ಮಗು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದೆ.

- Advertisement -

Latest News

error: Content is protected !!