Thursday, May 9, 2024
Homeಇತರಬೆಂಗಳೂರು ಕೇಂದ್ರ ಕಾರಾಗೃಹದ ಕದ ತಟ್ಟಿದ ಕೊರೊನಾ, 20 ಕೈದಿಗಳಿಗೆ, 6 ಭದ್ರತಾ ಸಿಬ್ಬಂದಿಗೆ ಕೊರೊನಾ...

ಬೆಂಗಳೂರು ಕೇಂದ್ರ ಕಾರಾಗೃಹದ ಕದ ತಟ್ಟಿದ ಕೊರೊನಾ, 20 ಕೈದಿಗಳಿಗೆ, 6 ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

spot_img
- Advertisement -
- Advertisement -

  ಬೆಂಗಳೂರು :  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಊಹಿಸಿಕೊಳ್ಳಲಾಗದ ರೀತಿಯಲ್ಲಿ ಹರಡುತ್ತಿದೆ. ಮತ್ತೊಂದು ಕಡೆ ಕೊರೊನಾ ಸಾವಿನ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಆಸ್ಪತ್ರೆಗಳಲ್ಲಿ  ಸರಿಯಾದ ಚಿಕಿತ್ಸೆ ಸಿಗದೇ ಕೊರೊನಾ ಸೋಂಕಿತರು ಪರದಾಡುತ್ತಿದ್ದಾರೆ.

ಇದೀಗ ಪರಪ್ಪನ ಅಗ್ರಹಾರದಲ್ಲಿ 20 ಕೈದಿಗಳಿಗೆ ಹಾಗೂ 6 ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ದರೋಡೆ, ಕೊಲೆ, ಕೊಲೆ ಯತ್ನ ಕೇಸ್ ಗಳಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಜೈಲು ಸೇರಿದ್ದ ವಿಚಾರಣಾಧಿನಾ ಕೈದಿಗಳಿಗೆ ಕೊರೊನಾ ಇರೋದು ದೃಢವಾಗಿದೆ. ಜೈಲಿಗೆ ಬರುವಾಗ  ಇವರನ್ನೆಲ್ಲಾ ತಪಾಸಣೆ ಮಾಡಿಸಿದಾಗ ಎಲ್ಲರಿಗೂ ಕೊರೊನಾ ನೆಗಟಿವ್ ಬಂದಿತ್ತು. ಆದ್ರೀಗ 20 ಕೈದಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ.

 ಹದಿನೈದು ದಿನಗಳ ಹಿಂದೆ ಬಂದ ಇಪ್ಪತ್ತು ಮಂದಿಯ ಬ್ಯಾಚನ್ನ ಒಂದೇ ಬ್ಯಾರಕ್ ಗೆ ಜೈಲಾಧಿಕಾರಿಗಳು ಹಾಕಿದ್ದರು. ಪರಪ್ಪನ ಅಗ್ರಹಾರ ಹೊರಗಿನ‌ ಮಹಿಳಾ ವಿಶೇಷ ಬ್ಯಾರಕ್ ನಲ್ಲಿ ಈ ಕೈದಿಗಳನ್ನು ಕ್ವಾರಂಟೈನ್ ಮಾಡಿದ್ದರು. ಹದಿನೈದು ದಿನ ಕ್ವಾರಂಟೈನ್‌ ಮುಗಿದ ಹಿನ್ನಲೆ ದೊಡ್ಡ ಜೈಲಿಗೆ ಶಿಪ್ಟ್ ಮಾಡಲು ಮತ್ತೆ ಅಧಿಕಾರಿಗಳು ತಪಾಸಣೆ ಮಾಡಿಸಿದಾಗ  ಅವರೆಲ್ಲರಿಗೂ ಕೊರೊನಾ ಇರೋದು ಗೊತ್ತಾಗಿದೆ. ಕೇವಲ ಇವತ್ತು ಕೈದಿಗಳು ಮಾತ್ರವಲ್ಲ  ಬ್ಯಾರಕ್ ನಲ್ಲಿ ಅವರಿಗೆ ಭದ್ರತೆಗಿದ್ದ 6 ಮಂದಿ ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಮಹಿಳಾ‌ ವಿಶೇಷ ಬ್ಯಾರಕ್ ಭದ್ರತೆಗೆ ಹೋಗಲು ಸಿಬ್ಬಂದಿ ಭಯಪಡುತ್ತಿದ್ದಾರೆ. ಸದ್ಯ ಜೈಲಿನಲ್ಲಿ 40 ಭದ್ರತಾ ಸಿಬ್ಬಂದಿ ಹಾಗೂ 460 ವಿಚಾರಣಾಧೀನಾ ಕೈದಿಗಳಿದ್ದಾರೆ. ಎಲ್ಲರೂ ಈಗ ಕೊರೊನೊ ಭಯದಲ್ಲೇ ಕಾಲ ಕಳೆಯುವಂತಾಗಿದೆ.ಅಲ್ಲದೇ ಎಲ್ಲರಿಗೂ ಕೊರೊನಾ ತಪಾಸಣೆಗೆ ಮನವಿ ಮಾಡುತ್ತಿದ್ದಾರೆ ಇಲ್ಲಿನ ಸಿಬ್ಬಂದಿ,   

- Advertisement -
spot_img

Latest News

error: Content is protected !!