Saturday, June 27, 2026
Homeಕರಾವಳಿಸುಳ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಕೋವಿಡ್-19 ಪಾಸಿಟಿವ್ ಮಹಿಳೆ ಸಾವು

ಸುಳ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಕೋವಿಡ್-19 ಪಾಸಿಟಿವ್ ಮಹಿಳೆ ಸಾವು

- Advertisement -
- Advertisement -

ಸುಳ್ಯ : ಸುಳ್ಯದಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ  ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸುಳ್ಯ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

 ಸುಳ್ಯದ ಕೆರೆಮೂಲೆ ನಿವಾಸಿ ರೋಟರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ವಾರದ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು. ಅದೇ ಸಮಯದಲ್ಲಿ ಆ ವಾರ್ಡಿನಲ್ಲಿ ಸೋಣಂಗೇರಿಯ ವ್ರದ್ಧರೊಬ್ಬರು ಕೂಡ ದಾಖಲಾಗಿದ್ದರು. ಅವರನ್ನು ಅಲ್ಲಿಂದ ಮಂಗಳೂರಿಗೆ ಚಿಕಿತ್ಸೆಗೆಂದು  ಕರೆದುಕೊಂಡು ಹೋಗಲಾಗಿತ್ತು. ಮಂಗಳೂರಿನಲ್ಲಿ ಆ ವೃದ್ಧರಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಒಬ್ಬ ನರ್ಸ್ ಗೆ ಸೋಂಕು ದೃಢಪಟ್ಟಿತ್ತು. ಅದೇ ನರ್ಸ್ ಐಸಿಯುನಲ್ಲಿ ದಾಖಲಾಗಿದ್ದ ಕೆರೆಮೂಲೆ ನಿವಾಸಿ ಮಹಿಳೆಗೂ ಚಿಕಿತ್ಸೆ ನೀಡುತ್ತಿದ್ದರೆನ್ನಲಾಗಿದೆ. ಮಹಿಳೆಯನ್ನು ಕೂಡ ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕೊರೋನ ಪರೀಕ್ಷೆಗೆ ಗಂಟಲ ದ್ರವ ತೆಗೆಯಲಾಗಿದ್ದು, ವರದಿ ಬರುವ ಮೊದಲೇ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊರೊನಾ ಪರೀಕ್ಷೆಯ ವರದಿ ಬರಲು ಬಾಕಿ ಇದ್ದುದರಿಂದ ಅವರ ಮೃತದೇಹವನ್ನು ಬಿಟ್ಟುಕೊಟ್ಟಿರಲಿಲ್ಲ. ನಿನ್ನೆ ರಾತ್ರಿ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಹಾಗಾಗಿ ಮಹಿಳೆಯ ಮೃತದೇಹದ ಅಂತ್ಯಕ್ರಿಯೆ ಮಂಗಳೂರಿನಲ್ಲಿಯೇ ನಡೆಯಲಿದೆ ಅನ್ನೋ ಮಾಹಿತಿಳು ಲಭ್ಯವಾಗಿದೆ.

- Advertisement -

Latest News

error: Content is protected !!