Wednesday, June 3, 2026
Homeಕರಾವಳಿಬಂಟ್ವಾಳ; ಹೋಟೆಲ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ, ನಗದಿದ್ದ ಬ್ಯಾಗ್ ನ್ನು ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್...

ಬಂಟ್ವಾಳ; ಹೋಟೆಲ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ, ನಗದಿದ್ದ ಬ್ಯಾಗ್ ನ್ನು ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್ ಸಿಬ್ಬಂದಿ

- Advertisement -
- Advertisement -

ಬಂಟ್ವಾಳ; ಹೋಟೆಲ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ, ನಗದಿದ್ದ ಬ್ಯಾಗ್ ನ್ನು ವಾರಸುದಾರರಿಗೆ ಹೋಟೆಲ್ ಸಿಬ್ಬಂದಿ ಹಸ್ತಾಂತರಿಸಿದ ಘಟನೆ ಕಲ್ಲಡ್ಕದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ.

ತಮಿಳುನಾಡು ಮೂಲದ ವ್ಯಕ್ತಿಗಳು ಮಂಗಳೂರಿಗೆ ಕೆಲಸದ ‌ನಿಮಿತ್ತ ಆಗಮಿಸಿ, ವಾಪಾಸು ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನೂತನ ವಾಗಿ ಆರಂಭವಾದ ಸಮುದ್ರ ಹೋಟೆಲ್ ಗೆ ಚಹಾ ಕುಡಿಯಲು ಬಂದಿದ್ದಾರೆ. ಈ ವೇಳೆ ಟೇಬಲ್ ಮೇಲೆ ಲಕ್ಷಾಂತರ ರೂ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ನ್ನು ಇಟ್ಟಿದ್ದರು.ಆದರೆ ಚಹಾ ಕುಡಿದ ಬಳಿಕ ಬ್ಯಾಗ್ ನ ಅರಿವಿಲ್ಲದ ಸೀದಾ ಕಾರು ಹತ್ತಿ ತೆರಳಿದ್ದರು. ಆದರೆ ಹೋಟೆಲ್ ಮಾಲಕ ‌ಕರುಣಾಕರ ಶೆಟ್ಟಿ ಅವರು ಬ್ಯಾಗ್ ನ್ನು ಗಮನಿಸಿ ಸೇಫ್ ಆಗಿ ಇಟ್ಟಿದ್ದರು. ಜೊತೆಗೆ ಇದರಲ್ಲಿ ಕಂಡು ಬಂದ ಮೊಬೈಲ್ ಸಂಖ್ಯೆ ಯ ಮೂಲಕ ಬ್ಯಾಗ್ ಮಾಲೀಕರ ಪತ್ತೆ ಮಾಡವಲ್ಲಿ ಯಶಸ್ವಿಯಾಗಿದ್ದಾರೆ.

 ಅದಾಗಲೇ ಬ್ಯಾಗ್ ಮಾಲೀಕರು ಇದರ ಅರಿವಿಲ್ಲದ ಬೆಂಗಳೂರು ತಲುಪಿದ್ದರು. ಪೋನ್ ಕರೆಗೆ ಎಚ್ಚರಗೊಂಡ ಅವರು ಅಲ್ಲಿಂದಲೇ ವಾಪಾಸು ಬಂದು ಬ್ಯಾಗ್ ನ್ನು ಪಡೆದುಕೊಂಡಿದ್ದಾರೆ. ಹೋಟೆಲ್ ಮಾಲೀಕನ ಪ್ರಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬ್ಯಾಗ್ ಸೇಫ್ ಆಗಿ ಪಡೆದ ಕುಟುಂಬ ಹೋಟೇಲ್ ಮಾಲೀಕರಿಗೆ ಗಿಪ್ಟ್ ನೀಡಲು ಮುಂದಾಗಿದೆ.ಆದರೆ ಹೋಟೆಲ್ ಮಾಲೀಕ ಎಲ್ಲವನ್ನು ನಿರಾಕರಿಸಿ ಉತ್ತಮ ರೀತಿಯಲ್ಲಿ ಉಪಚರಿಸಿ ವಾಪಾಸು ಕಳುಹಿಸಿ ಕೊಟ್ಟಿದ್ದಾರೆ .

- Advertisement -

Latest News

error: Content is protected !!