Wednesday, June 3, 2026
Homeಕರಾವಳಿಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು; ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

ಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು; ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

- Advertisement -
- Advertisement -

ಬೆಳ್ತಂಗಡಿ : ಚಿರತೆ ದಾಳಿಯಿಂದ ಗಾಯಗೊಂಡಿದ್ದ ಕಡವೆ ಇಂದು ಕುತ್ತಿಗೆಯಲ್ಲಿ ತೀವ್ರ ರಕ್ತಸಾವ್ರದಿಂದ ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ಬೆಳ್ತಂಗಡಿ ತಾಲೂಕಿನ  ನೆರಿಯ ಕಾಡಿನಲ್ಲಿ ನಡೆದಿದೆ.

ನೆರಿಯ ಗ್ರಾಮದ ಮಲ್ಲ ಪ್ರದೇಶದಲ್ಲಿ ಜ.17 ರಂದು ಬೆಳಗ್ಗೆ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡು ರಕ್ತ ಸಾವ್ರದಿಂದ ಕಡವೆಯ ಶವ ಪತ್ತೆಯಾಗಿದೆ. ಕಳೆದ ರಾತ್ರಿ ನೆರಿಯ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಕಡವೆಯ ಕುತ್ತಿಗೆಗೆ ಗಾಯವಾಗಿದ್ದು ಚಿರತೆಯಿಂದ ತಪ್ಪಿಸಿಕೊಂಡು ಬಂದಿದ್ದು‌. ಇಂದು ಮಲ್ಲ ಪ್ರದೇಶದಲ್ಲಿ ರಕ್ತಸಾವ್ರದಿಂದ ಕಡವೆ ಸಾವನ್ನಪ್ಪಿದೆ. ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಾಲಾಗಿದ್ದು. ನೆರಿಯ ಪಶು ವೈದ್ಯರು ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ದಫನ ಮಾಡಿದ್ದಾರೆ.

- Advertisement -

Latest News

error: Content is protected !!