Saturday, June 6, 2026
Homeಕರಾವಳಿಪುತ್ತೂರು; ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ

ಪುತ್ತೂರು; ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ

- Advertisement -
- Advertisement -

ಪುತ್ತೂರು; ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ ಮಾಡಿ ಹೆತ್ತವರು ಮಗನ ಅಗಲಿಕೆಯ ನೋವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಡಿ. 31ರಂದು ದ್ವಿಚಕ್ರ ವಾಹನ ಹಾಗೂ ಕಾರು ಅಪಘಾತದಲ್ಲಿ ಗಾಯಗೊಂಡು ದ್ವಿಚಕ್ರ ವಾಹನದ ಸಹಸವಾರ ಇರ್ದೆ ಗ್ರಾಮದ ಉಪ್ಪಳಿಗೆ ನಾರಾಯಣ ನಾಯ್ಕ ಮತ್ತು ಕಲ್ಯಾಣ ದಂಪತಿಯ ಪುತ್ರ ಪ್ರವೀಣ್‌ (18) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ. 7ರಂದು ಅವರು ಮೃತಪಟ್ಟಿದ್ದಾರೆ.

ಆದರೆ ಪುತ್ರ ಶೋಕದ ನಡುವೆಯೂ ಮೃತರ ಹೆತ್ತವರು ಪ್ರವೀಣ್‌ ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.ಈ ಮೂಲಕ ಮಗನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

- Advertisement -

Latest News

error: Content is protected !!