Tuesday, October 13, 2026
Homeಕರಾವಳಿಉಡುಪಿಉಡುಪಿ: ಸ್ಕೂಟರ್ ಗೆ ಬಸ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

ಉಡುಪಿ: ಸ್ಕೂಟರ್ ಗೆ ಬಸ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

- Advertisement -
- Advertisement -

ಉಡುಪಿ: ಸ್ಕೂಟರ್ ಗೆ ಬಸ್  ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಪಲಿಮಾರು ಬಳಿ ನಡೆದಿದೆ.
ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು ಮೃತ ಸ್ಕೂಟರ್ ಸವಾರ. ಈತ ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಢಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಇನ್ನು ಸ್ಕೂಟಿಯಲ್ಲಿದ್ದ ತುಷಾರ್ ಪಲಿಮಾರು ಹಾಗೂ ಕೌಶಿಕ್ ಎರ್ಮಾಳು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

- Advertisement -

Latest News

error: Content is protected !!