Saturday, June 6, 2026
Homeಕರಾವಳಿಪರ್ಸ್ ಕಳ್ಳಿಯನ್ನು ಹಿಡಿದ ಕುಕ್ಕೆ ಸುಬ್ರಮಣ್ಯದ ಭದ್ರತಾ ಸಿಬ್ಬಂದಿ

ಪರ್ಸ್ ಕಳ್ಳಿಯನ್ನು ಹಿಡಿದ ಕುಕ್ಕೆ ಸುಬ್ರಮಣ್ಯದ ಭದ್ರತಾ ಸಿಬ್ಬಂದಿ

- Advertisement -
- Advertisement -

ಸುಬ್ರಮಣ್ಯ; ದೇಗುಲಕ್ಕೆ ಬಂದ ಭಕ್ತರೊಬ್ಬರ ಪರ್ಸ್ ಕದ್ದ ಕಳ್ಳಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ನೀಡಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಭಕ್ತರೊಬ್ಬರು ತನ್ನ ಮೊಬೈಲ್ ಹಾಗೂ ಪರ್ಸ್ ಕಳೆದುಕೊಂಡಿರುವ ಬಗ್ಗೆ ದೇವಾಲಯದ ಕಚೇರಿಗೆ ತಿಳಿಸಿದ್ದರು. ಕೂಡಲೇ ಕಚೇರಿ ಸಿಬ್ಬಂದಿ ಎಲ್ಲಾ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಪರ್ಸ್ ಎಗರಿಸುವ ದೃಶ್ಯ ಕಂಡುಬಂದಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ  ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ  ಅವರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ .ಪರ್ಸ್ ಎಗರಿಸಿದ  ಮಹಿಳೆ ಬಸ್ಸು ನಿಲ್ದಾಣಕ್ಕೆ ಆಗಮಿಸಿ ಬಸ್ಸು ಏರಿದ್ದಳು. ಬಳಿಕ ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.

ಭದ್ರತಾ ಸಿಬ್ಬಂದಿಯ  ಸಮಯ ಪ್ರಜ್ಞೆಯಿಂದ ಹಲವಾರು ಅಗತ್ಯ ದಾಖಲೆಗಳಿದ್ದ ಪರ್ಸ್ ಮರಳಿ ಸಿಕ್ಕ ಖುಷಿಯಲ್ಲಿ  ಯಾತ್ರಾರ್ಥಿ ಅಭಿನಂದಿಸಿದ್ದಾರೆ  .

- Advertisement -

Latest News

error: Content is protected !!